ದೇಶ

ಶೇ.2 ಭಾರತೀಯರಷ್ಟೇ ಮಧ್ಯಮ ವರ್ಗದವರು

Vishwanath S

ನವದೆಹಲಿ: ಭಾರತದಲ್ಲಿ ಹೆಚ್ಚಿನವರು ತಾವು ಮಧ್ಯಮ ವರ್ಗದವರು ಎಂದೇ ಹೇಳಿಕೊಳ್ಳುತ್ತಾರೆ. ಆದರೆ, ನಿಜಕ್ಕೂ ನಮ್ಮ ದೇಶದಲ್ಲಿರುವ ಮಧ್ಯಮ ವರ್ಗದವರೆಷ್ಟು ಗೊತ್ತಾ? ಕೇವಲ ಶೇ.2ರಷ್ಟು ಮಂದಿ. ಹೀಗೆಂದು ಪ್ಯೂ ಸಂಶೋಧನಾ ಕೇಂದ್ರದ ಸಮೀಕ್ಷೆಯು ತಿಳಿಸಿದೆ.

ವರದಿಯ ಪ್ರಕಾರ, ಎಲ್ಲರೂ ಅಂದುಕೊಂಡಂತೆ ಭಾರತದಲ್ಲಿರುವ ಹೆಚ್ಚಿನವರು ಮಧ್ಯಮ ವರ್ಗದವರಲ್ಲ. ಹೆಚ್ಚಿನ ಭಾರತೀಯರು ಬಡವರು. ವಿಶ್ವ ಜನಸಂಖ್ಯೆಯಾದ್ಯಂತ ಆದಾಯ ಮಟ್ಟದಲ್ಲಾಗುತ್ತಿರುವ ಬದಲಾವಣೆ ಬಗ್ಗೆಯೂ ಅಧ್ಯಯನ ಮಾಡಿರುವ ಸಂಸ್ಥೆ, 2000ನೇ ಇಸವಿಯ ಆರಂಭದಲ್ಲಿ ಜಾಗತಿಕ ಬಡತನದಲ್ಲಿ ಇಳಿಮುಖವಾಗಿತ್ತು. ಹೀಗಿದ್ದಾಗ್ಯೂ, ವಿಶ್ವದ ಮಧ್ಯಮ ವರ್ಗದವರ ಪ್ರಮಾಣ ಶೇ.15ಕ್ಕಿಂತ ಕಡಿಮೆಯೇ ಇತ್ತು ಎಂದು ತಿಳಿಸಿದೆ.

ಭಾರತದಲ್ಲಿ ಶೇ.95ರಷ್ಟು ಮಂದಿ ಕಡಿಮೆ ಆದಾಯ  ಹೊಂದಿರುವವರು ಅಂದರೆ ಬಡವರು. ಶೇ.2ರಷ್ಟು ಮಂದಿ ಮಾತ್ರ ಮಧ್ಯಮ ವರ್ಗದವರು. ಇದೇ ವೇಳೆ, 2001ರಲ್ಲಿ ಶೇ.35ರಷ್ಟಿದ್ದ ದೇಶದ ಬಡತನದ ದರ 2011ರ ವೇಳೆಗೆ ಶೇ.20ಕ್ಕಿಳಿದಿದೆ. ಅದೇ ರೀತಿ, ಮಧ್ಯಮ ಆದಾಯ ಹೊಂದಿರುವವರ ಸಂಖ್ಯೆ ಶೇ.1ರಿಂದ ಶೇ.3ಕ್ಕೇರಿದೆ ಎಂದೂ ಹೇಳಿದೆ.

SCROLL FOR NEXT