ನವದೆಹಲಿ: ಖಾಸಗಿ ಕಂಪನಿಗಳನ್ನು ಆರ್ ಟಿಐ ಕಾಯ್ದೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ಆಯೋಗವು ಮಹತ್ವದ ಹೆಜ್ಜೆ ಇಟ್ಟಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಮೂಲಕ ಗ್ರಾಹಕರು ನೀಡಿದ ದೂರಿಗೆ ಸಂಬಂಧಿಸಿ ಮೊಬೈಲ್ ಸೇವಾದಾರರರು ಕೈಗೊಂಡಿರುವ ಕ್ರಮದ ವಿವರವನ್ನು ಆರ್ ಟಿಐ ಮೂಲಕ ಪಡೆದುಕೊಳ್ಳಲು ಸಾಧ್ಯವಿದೆ. ಈ ವಿಚಾರವನ್ನು ಮಾಹಿತಿ ಆಯುಕ್ತ ಬಸಂತ್ ಸೇಠ್ ತಿಳಿಸಿದ್ದಾರೆ.