ವಾರಣಾಸಿ: ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಇಂದು ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ನೀಡಬೇಕಿದ್ದ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇಂದಿನ ವಾರಣಾಸಿ ಪ್ರವಾಸವನ್ನು ಮೋದಿ ಒತ್ತಾಯಪೂರ್ವಕವಾಗಿ ಮುಂದೂಡಿದ್ದಾರೆ ಎನ್ನಲಾಗಿದೆ.
ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಬೇಕಾಗಿದ್ದ ಮೋದಿ ದರೇಕಾದಲ್ಲಿ ಮೆಗಾ ರ್ಯಾಲಿ ಉದ್ದೇಶಿಸಿ ಮಾತನಾಡಬೇಕಿತ್ತು. ಜೊತೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಟ್ರಾಮಾ ಸೆಂಟರ್ ಉದ್ಘಾಟಿಸಬೇಕಿತ್ತು.
ಇದೇ ವೇಳೆ ಮೋದಿ ರ್ಯಾಲಿ ಉದ್ದೇಶಿಸಿ ಮಾತನಾಡಬೇಕಿದ್ದ ಡಿಎಲ್ ಡಬ್ಲ್ಯೂ ಮೈದಾನದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬ ಮೃತ ಪಟ್ಟಿರುವ ದುರಾದೃಷ್ಟಕರ ಘಟನೆ ನಡೆದಿದೆ.
ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಿದ್ಧತೆ ನಡೆಸಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಿಂದ ಪಿಎಂ ಮತ್ತು ಸಿಎಂ ಹೆಲಿಕಾಪ್ಟರ್ ನಲ್ಲಿ ಉತ್ತರ ಬಿಎಚ್ ವು ಕ್ಯಾಂಪಸ್ ವೀಕ್ಷಣೆಗೆ ಸಿದ್ದರಾಗಿದ್ದರು.
ಇನ್ನು ಉತ್ತರ ಪ್ರದೇಶ ಬಿಜೆಪಿ ಮುಖಂಡರು 30 ಸಾವಿರ ಮಂದಿ ಗಾಗಿ 9 ಕೋಟಿ ವೆಚ್ಚದಲ್ಲಿ ವಾಟರ್ ಪ್ರೂಫ್ ಟೆಂಟ್ ನಿಲ್ಲಿಸಲು ಸಿದ್ಧತೆ ಮಾಡಲಾಗಿತ್ತು.