ರಕ್ತಸಿಕ್ತ ಚಾಕು(ಸಾಂದರ್ಭಿಕ ಚಿತ್ರ) 
ದೇಶ

ಚುಡಾಯಿಸಿದ್ದಕ್ಕೆ ಪ್ರತಿಭಟಿಸಿದ ಯುವತಿಯನ್ನು 35 ಬಾರಿ ಇರಿದು ಕೊಂದ ಸಹೋದರರು!

19 ವರ್ಷದ ಯುವತಿಯೊಬ್ಬಳು ಚುಡಾಯಿಸಿದ್ದನ್ನು ಪ್ರತಿಭಟಿಸಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದ್ದಕ್ಕೆ ಕ್ರೋಧ ಕೊಂಡ ಸಹೋದರರಿಬ್ಬರು ಆಕೆಗೆ 35 ಬಾರಿ

ನವದೆಹಲಿ: 19 ವರ್ಷದ ಯುವತಿಯೊಬ್ಬಳು ಚುಡಾಯಿಸಿದ್ದನ್ನು ಪ್ರತಿಭಟಿಸಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದ್ದಕ್ಕೆ ಕ್ರೋಧ ಕೊಂಡ ಸಹೋದರರಿಬ್ಬರು ಆಕೆಗೆ 35 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ಇಲ್ಲಿನ ಆನಂದ್‌ ಪ್ರಭಾತ್‌ ಪ್ರದೇಶದಲ್ಲಿ ನಡೆದಿದೆ.

ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜೈ ಪ್ರಕಾಶ್‌ ಮತ್ತು ಆತನ ಸೋದರ ಅಜಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಯುವತಿ ಮೀನಾಕ್ಷಿ, ಸಹೋದರರಾದ ಪ್ರಕಾಶ್‌ ಮತ್ತು ಅಜಯ್‌ ಎಂಬುವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಇದರಿಂದ ಕೆರಳಿದ ಸಹೋದರರು ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು.  

ಅದರಂತೆ ಗುರುವಾರ ಸಂಜೆ ಯುವತಿ ಮಾರುಕಟ್ಟೆಯಿಂದ ಆನಂದ್‌ ವಿಹಾರ ಪ್ರದೇಶದಲ್ಲಿರುವ ತನ್ನ ಮನೆಗೆ ಬರುತ್ತಿದ್ದಾಗ ಮತ್ತೆ ಆಕೆಯನ್ನು ಚುಡಾಯಿಸಲು ಮುಂದಾದರು. ಇದಕ್ಕೆ ಪ್ರತಿರೋಧ ತೋರಿದ ಯುವತಿ ಅವರಿಂದ ತಪ್ಪಿಸಿಕೊಂಡು ತನ್ನ ಪಕ್ಕದ ಮನೆಗೆ ನುಗ್ಗಿದ್ದಾಳೆ. ಆದರೆ, ಆಕೆಯನ್ನು ಅವರು ಒಳಗೆ ಸೇರಿಸಿಕೊಳ್ಳದೇ ಹೊರಗೆ ತಳ್ಳಿದ್ದಾರೆ.

ಬಳಿಕ ಸೋದರರು ಆಕೆಯನ್ನು ಓಡಿಸಿಕೊಂಡು ಹೋಗಿ 35 ಬಾರಿ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!