ಸಾಂದರ್ಭಿಕ ಚಿತ್ರ 
ದೇಶ

ಕಳೆದ ವರ್ಷ ದೇಶದಲ್ಲಿ 5650 ಅನ್ನದಾತರು ಆತ್ಮಹತ್ಯೆಗೆ ಬಲಿ

2014ರಲ್ಲಿ ಆತ್ಮಹತ್ಯೆಗೀಡಾದ ಒಟ್ಟು ರೈತರ ಸಂಖ್ಯೆ 5650. ಇದರಲ್ಲಿ ಮಹಾರಾಷ್ಟ್ರ, ತೆಲಂಗಾಣ ಮತ್ತು ಛತ್ತೀಸ್‍ಗಡದ್ದೇ ಸಿಂಹಪಾಲು! ನ್ಯಾಷನಲ್ ಕ್ರೈಮ್ ...

ನವದೆಹಲಿ: 2014ರಲ್ಲಿ ಆತ್ಮಹತ್ಯೆಗೀಡಾದ ಒಟ್ಟು ರೈತರ ಸಂಖ್ಯೆ 5650. ಇದರಲ್ಲಿ ಮಹಾರಾಷ್ಟ್ರ, ತೆಲಂಗಾಣ ಮತ್ತು ಛತ್ತೀಸ್‍ಗಡದ್ದೇ ಸಿಂಹಪಾಲು! ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ದೇಶದಲ್ಲಿ 2014ರಲ್ಲಿ ನಡೆದ ಅಪಘಾತ ಮತ್ತು ಆತ್ಮಹತ್ಯೆ ಸಾವುಗಳ ವಿವರ ಕಲೆಹಾಕಿದ್ದು, ಮಹಾರಾಷ್ಟ್ರದ 2598, ತೆಲಂಗಾಣದ 89 ಹಾಗೂ ಮಧ್ಯಪ್ರದೇಶದ 826 ಮಂದಿ ರೈತರು ಆತ್ಮಹತ್ಯೆಗೆ ಬಲಿಯಾಗಿದ್ದಾರೆಂದು ತಿಳಿಸಿದೆ. ಸಾಲಬಾಧೆ ಕಾರಣ ನೀಡಿ ಸತ್ತವರ ಸಂಖ್ಯೆಯೇ ಹೆಚ್ಚು ಎಂದು ಸಮೀಕ್ಷೆ ತಿಳಿಸಿದ್ದು ಮಿಕ್ಕಂತೆ ಕೌಟುಂಬಿಕ, ಬೆಳೆನಾಶ, ಅನಾರೋಗ್ಯದಿಂದ ಬೇಸತ್ತು ಜೀವಬಿಟ್ಟಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ಅಂದರೆ ಶೇ.31.1ರಷ್ಟು ರೈತ ಮಹಿಳೆಯರ ಆತ್ಮಹತ್ಯೆ  ದಾಖಲಾಗಿದ್ದು, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿವೆ. ಆತ್ಮಹತ್ಯೆಗೀಡಾದ ರೈತರಲ್ಲಿ 30ರಿಂದ 50ರ ವಯೋಮಾನನದವರ ಸಂಖ್ಯೆಯೇಹೆಚ್ಚು. ಕರ್ನಾಟಕ ಕೂಡ ಆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಒಟ್ಟು 321 ರೈತರ ಆತ್ಮಹತ್ಯೆಗಳು ದಾಖಲಾಗುವ ಮೂಲಕ 5ನೇ ಸ್ಥಾನದಲ್ಲಿದೆ. ಒಟ್ಟು ಆತ್ಮಹತ್ಯೆ ಸಂಖ್ಯೆಯಲ್ಲೂ 10,745 ಸಾವುಗಳೊಂದಿಗೆ ರಾಜ್ಯ 4ನೇ ಸ್ಥಾನ ಪಡೆದಿದೆ.ಒಟ್ಟು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಸಣ್ಣಪ್ರಮಾಣದ ಇಳಿಕೆಯಾಗಿದ್ದು, 2013ರಲ್ಲಿ 1,34,799 ಸಾವುಗಳಾಗಿದ್ದರೆ 2014ರಲ್ಲಿ 1,31,666ಕ್ಕೆ ಇಳಿದಿರುವುದಾಗಿ ಎನ್‍ಸಿಆರ್‍ಬಿ ತಿಳಿಸಿದೆ. ಈ ಪಟ್ಟಿ ಯಲ್ಲೂ ಮಹಾರಾಷ್ಟ್ರವೇ ಮುಂಚೂಣಿಯಲ್ಲಿದ್ದು 16,307 ಸಾವುಗಳು ಸಂಭವಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ