ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(ಸಂಗ್ರಹ ಚಿತ್ರ) 
ದೇಶ

ಆಂಗ್ಲ ಸುದ್ದಿ ಮಾಧ್ಯಮಗಳಲ್ಲಿ ಪಕ್ಷವನ್ನು ಪ್ರತಿನಿಧಿಸದಂತೆ ಆಂಧ್ರ ಸಚಿವರಿಗೆ ಸಿ.ಎಂ ನಿರ್ಬಂಧ

ಸಚಿವರಿಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು ಬಾರದೆ ಇರುವುದರಿಂದ ಮುಜುಗರಕ್ಕೊಳಗಾಗಿರುವ ಆಂಧ್ರ ಮುಖ್ಯಮಂತ್ರಿ ಸುದ್ದಿ ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳದೇ ಇರಲು ಸೂಚಿಸಿದ್ದಾರೆ.

ಹೈದರಾಬಾದ್: ಆಂಧ್ರಪ್ರದೇಶ ಸಚಿವರಿಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು ಬಾರದೆ ಇರುವುದರಿಂದ ಮುಜುಗರಕ್ಕೊಳಗಾಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಂಗ್ಲ ಸುದ್ದಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳದೇ ಇರಲು ಸಚಿವರಿಗೆ  ಸೂಚನೆ ನೀಡಿದ್ದಾರೆ.

ಗೋದಾವರಿ ಪುಷ್ಕರ ಸಂದರ್ಭದಲ್ಲಿ ನಡೆದ ಕಾಲ್ತುಳಿತ ವಿಷಯದ ಬಗ್ಗೆ ಆಂಗ್ಲ ಮಾಧ್ಯಮಗಳು ಚರ್ಚೆ ನಡೆಸಿದ್ದವು, ಇಂಗ್ಲೀಷ್ ನಿರರ್ಗಳವಾಗಿ ಮಾತನಾಡಲು ಬಾರದ ಕಾರಣ ಚರ್ಚೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಟಿಡಿಪಿ ಪಕ್ಷದ ದೃಷ್ಟಿಕೋನವನ್ನು ಸಮರ್ಥವಾಗಿ ಮಂಡಿಸಲು ಆಂಧ್ರಪ್ರದೇಶ ಸಚಿವರು ವಿಫಲರಾಗಿದ್ದರು. ಇದು ಸಿ.ಎಂ ಚಂದ್ರಬಾಬು ನಾಯ್ಡು ಅವರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.

ಚರ್ಚಾ ಕಾರ್ಯಕ್ರಮದಲ್ಲಿ ಪಲ್ಲೆ ರಘಿನಾಥ ರೆಡ್ಡಿ ಹಾಗೂ ಪಿ ನಾರಾಯಣ್ ಅವರು ಫೋನ್ ಮೂಲಕ ಮಾತನಾಡಿದ್ದರ ಬೆನ್ನಲ್ಲೇ, ಆಂಧ್ರದ ಯಾವುದೇ ಸಚಿವರು ಆಂಗ್ಲ ಸುದ್ದಿ ಮಾಧ್ಯಮಗಳಲ್ಲಿ ಮಾತನಾಡಬಾರದು ಎಂಬ ನಿರ್ಬಂಧ ವಿಧಿಸಲಾಗಿದೆ.  

ಸಿ.ಎಂ ಚಂದ್ರಬಾಬು ನಾಯ್ಡು ಹೊರಡಿಸಿರುವ ಆದೇಶ ಆಂಧ್ರಪ್ರದೇಶದ ಸಚಿವ ಗಲ್ಲಾ ಜಯದೇವ್ ಅವರನ್ನು ಹೊರತುಪಡಿಸಿ ಎಲ್ಲರಿಗೂ ಅನ್ವಯವಾಗಲಿದ್ದು  ಗಲ್ಲಾ ಜಯದೇವ್ ಮಾತ್ರ ಆಂಗ್ಲ ಮಾಧ್ಯಮಗಳಲ್ಲಿ ಪಕ್ಷವನ್ನು ಪ್ರತಿನಿಧಿಸಬೇಕೆಂದು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್