ಅಸ್ಸಾಂನಲ್ಲಿ ಮಹಿಳೆ ಶಿರಚ್ಛೇದ (ಸಾಂದರ್ಭಿಕ ಚಿತ್ರ) 
ದೇಶ

ಮಾಟ ಮಾಡುತ್ತಿದ್ದಾಳೆಂದು ಶಂಕಿಸಿ ಮಹಿಳೆ ಶಿರಚ್ಛೇದ ಮಾಡಿದ ಗ್ರಾಮಸ್ಥರು

ಮಾಟ ಮಾಡುತ್ತಿದ್ದಾಳೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಅಸ್ಸಾಂನ ಸೋನಿತ್‍ಪುರದಲ್ಲಿ 60 ವರ್ಷದ ಮಹಿಳೆ ತಲೆ ಕತ್ತರಿ ಹಾಕಲಾಗಿದೆ. ಕೂಡಲೇ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ...

ತೇಜ್‍ಪುರ್(ಅಸ್ಸಾಂ): ಮಾಟ ಮಾಡುತ್ತಿದ್ದಾಳೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಅಸ್ಸಾಂನ ಸೋನಿತ್‍ಪುರದಲ್ಲಿ 60 ವರ್ಷದ ಮಹಿಳೆ ತಲೆ ಕತ್ತರಿ ಹಾಕಲಾಗಿದೆ. ಕೂಡಲೇ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಘಟನೆಯ ಬಗ್ಗೆ ವಿವರಣೆ ನೀಡಿರುವ ಬಿಸ್ವನಾಥ್ ಚಿರಾಲಿ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ದೇವ್ ರಾಯ್, ವಿಮಜುಲಿ ಗ್ರಾಮದಲ್ಲಿರುವ ಮಹಿಳೆಯ ಮನೆಗೆ ನುಗ್ಗಿದ 200ಕ್ಕೂ ಅಧಿಕ ಗ್ರಾಮಸ್ಥರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.

ಸ್ಥಳೀಯರು ಮಹಿಳೆಯ ಮನೆಗೆ ನುಗ್ಗಿ ಆಕೆಗೆ ಮನ ಬಂದಂತೆ ಥಳಿಸಿದರು. ಇದಾದ ಬಳಿಕ ಹರಿತವಾದ ಆಯುಧದಿಂದ ತಲೆಯನ್ನು ಕಡಿದು ಹಾಕಿದರು. ಸುದ್ದಿ ತಿಳಿಯುತ್ತಲೇ ಪೊಲೀಸರು ಗ್ರಾಮಕ್ಕೆ ಧಾವಿಸಿದರು. ಆದರೆ ಉದ್ರಿಕ್ತ ಜನರು ಪೊಲೀಸರ ಪ್ರವೇಶಕ್ಕೆ ತಡೆಯೊಡ್ಡಿದರು ಎಂದು ರಾಯ್ ತಿಳಿಸಿದ್ದಾರೆ. ಇದರ ಹೊರತಾಗಿಯೂ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ ತಂಡ ಜನರ ಗುಂಪನ್ನು ಚದುರಿಸಿದರು. ಸ್ಥಳದಿಂದ ಆಯುಧ ಮತ್ತು ಮಹಿಳೆಯ ಮೃತ ದೇಹ ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT