ನವದೆಹಲಿ: ವಾಣಿಜ್ಯ ಉತ್ಪನ್ನಗಳ ಮೇಲೆ ದೇವತೆಗಳ ಚಿತ್ರ ಬಳಕೆ ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವಾಣಿಜ್ಯ ಉತ್ಪನ್ನ ಹಾಗೂ ಜಾಹೀರಾತಿನಲ್ಲಿ ದೇವತೆಗಳ ಚಿತ್ರ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್ ದತ್ತು ನೇತೃತ್ವದ ಪೀಠ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನಮ್ಮ ಕಾರು, ಮನೆಗಳಲ್ಲಿ ನಮ್ಮ-ನಮ್ಮ ದೇವರ ಚಿತ್ರ ಹೊಂದಿದ್ದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಪೀಠ, ಜನ ಅವರ ಇಷ್ಟದ ದೇವತೆಗಳ ಚಿತ್ರ ಬಳಸುವುದನ್ನು ತಡೆ ಯುವುದೇಕೆ ಎಂದು ಹೇಳಿದೆ.