ದೇಶ

11 ಕೋಟಿಗೂ ಅಧಿಕ ಮಂದಿಯಿಂದ ಪುಷ್ಕರ ಪುಣ್ಯ ಸ್ನಾನ

Sumana Upadhyaya

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ  12 ದಿನಗಳ ಮಹಾಪುಷ್ಕರ ಮೇಳದಲ್ಲಿ 11 ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿದ್ದಾರೆ.

ಮಹಾಪುಷ್ಕರ ಮೇಳ ನಿನ್ನೆಗೆ ವೈಭವಯುತ ತೆರೆ ಕಂಡಿದ್ದು, 6.40 ಕೋಟಿ ಮಂದಿ ತೆಲಂಗಾಣದಲ್ಲಿ ಮತ್ತು ಉಳಿದವರು ಆಂಧ್ರಪ್ರದೇಶ ರಾಜ್ಯದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡಿದ್ದಾರೆ.

ಈ ಕುರಿತು ರಾಜಮುಂಡಿಯಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಪುಷ್ಕರ ಇತಿಹಾಸದಲ್ಲಿ ಒಂದು ಮರೆಯಲಾಗದ ಘಟನೆಯಾಗಿ ಉಳಿಯಲಿದೆ. ಆರಂಭದ ದಿನ ಕಾಲ್ತುಳಿತವಾಗಿದ್ದು ಒಂದು ದುರದೃಷ್ಟಕರ. ಆ ನಂತರ ಅಧಿಕಾರಿಗಳು ಬಹಳ ಜಾಗರೂಕರಾಗಿದ್ದರು ಎಂದರು.
ಪ್ರತಿ 144 ವರ್ಷಗಳಿಗೊಮ್ಮೆ ಬರುವ ಮಹಾಪುಷ್ಕರ ಜುಲೈ 14ಕ್ಕೆ ಆರಂಭಗೊಂಡಿತ್ತು. ಆ ದಿನ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತವುಂಟಾಗಿ 27 ಜನ ಸಾವನ್ನಪ್ಪಿದ್ದರು.

ಪುಷ್ಕರ ನದಿಗಳನ್ನು ಪೂಜಿಸುವ ಧಾರ್ಮಿಕ ಕಾರ್ಯಕ್ರಮವಾಗಿದ್ದು ಪ್ರತಿ 12 ವರ್ಷಗಳಿಗೊಮ್ಮೆ ಬರುತ್ತದೆ. ಆದರೆ ಈ ವರ್ಷ ಬಂದ ಪುಷ್ಕರ ಬಹಳ ಪವಿತ್ರವಾಗಿದ್ದು, 144 ವರ್ಷಗಳಿಗೊಮ್ಮೆ ಬರುತ್ತದೆ ಎಂದು ಅರ್ಚಕರು ಹೇಳುತ್ತಾರೆ, ದಕ್ಷಿಣ ಗಂಗೆ ಎಂದೇ ಖ್ಯಾತಿ ಗಳಿಸಿರುವ ಗೋದಾವರಿಯಲ್ಲಿ ದೇಶಾದ್ಯಂತದಿಂದ ಜನರು ಆಗಮಿಸಿ ಪವಿತ್ರ ಸ್ನಾನದಲ್ಲಿ ತೊಡಗಿದ್ದರು.

SCROLL FOR NEXT