ನವದೆಹಲಿ: ಪಂಜಾಬ್ ನಲ್ಲಿ ಉಗ್ರರು ಅಟ್ಟಹಾಸಗೈದಿರುವುದು ಲೋಕಸಭೆಯಲ್ಲಿ ಪ್ರತಿಧ್ವನಿಸಿತು. ಕಾಂಗ್ರೆಸ್ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರಸ್ತಾಪಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಗಡಿಯಲ್ಲಿ ಉಗ್ರರ ದಾಳಿಯನ್ನು ಹತ್ತಿಕ್ಕುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ.
ದಾಳಿ ಬಗ್ಗೆ ಸುಳಿವು ನೀಡಬೇಕಿದ್ದ ಕೇಂದ್ರ ಗುಪ್ತಚರ ಎಲ್ಲಿಗೆ ಹೋಗಿತ್ತು. ಉಗ್ರರ ದಾಳಿಯಲ್ಲಿ ಕೇಂದ್ರ ಸರ್ಕಾರ ವಿಫಲಾವಾಗಿದೆ ಎಂದು ಪಂಜಾಬ್ ಸರ್ಕಾರವೂ ಆಪಾದಿಸಿದೆ ಎಂದ ಅವರು, ಗಡಿ ಸಂರಕ್ಷಣೆ ಕೇಂದ್ರದ ಹೊಣೆಯಾಗಿದ್ದು, ಆ ಹೊಣೆಗಾರಿಕೆಯಿಂದ ಕೇಂದ್ರ ತಪ್ಪಿಸಿಕೊಳ್ಳುತ್ತಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ದೂರಿದ್ದಾರೆ.