ದೀನಾನಗರ್: ಉಗ್ರರು ದಾಳಿ ನಡೆಸಿದ ಪಂಜಾಬ್ ನ ಗುರುದಾಸ್‌ಪುರದ ದೀನಾನಗರ್ ಪೊಲೀಸ್ ಠಾಣೆಯಲ್ಲಿ ಶೋಧ ಕಾರ್ಯ ನಡೆಸುವಾಗ 8 ಜೀವಂತ ಗ್ರೆನೇಡ್ ಪತ್ತೆಯಾಗಿವೆ.
ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಸೇನಾ ಪಡೆ ಶೋಧಾ ಕಾರ್ಯ ಕೈಗೊಂಡಿತ್ತು. ಈ ವೇಳೆ 8 ಜೀವಂತ ಗ್ರೆನೇಡ್ ಪತ್ತೆಯಾಗಿದೆ. 8 ಗ್ರೆನೆಡ್ ನನ್ನು ಸೇನಾ ಪಡೆ ನಿಷ್ಟ್ರಿಯಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರು ತಂದಿದ್ದ ಅಪಾರ ಶಸ್ತಾಸ್ತ್ರಗಳು ಕೂಡ ಸ್ಥಳದಲ್ಲಿಯೇ ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆಸಲಾಗಿದೆ. ವರದಿ ಪ್ರಕಾರ, ಘಟನೆಯಲ್ಲಿ ಮೂರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಕಾರ್ಯಾಚರಣೆಯಲ್ಲಿ ಎಸ್.ಪಿ, ಇಬ್ಬರು ಹೋಂ ಗಾರ್ಡ್ ಗಳು ಮೂವರು ನಾಗರಿಕರು ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿದ್ದರು.