ದೀನಾನಗರ: ಮಿಲಿಟರಿ ಸಮವಸ್ತ್ರ ಧರಿಸಿರುವ ಮೂವರು ಉಗ್ರರು ಶಸ್ತ್ರಾಸ್ತ್ರಗಳನ್ನು ಹಿಡಿದು ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿನ್ನೆ ಗುರುದಾಸ್ ಪುರದಲ್ಲಿರುವ ದೀನಾನಗರ್ ಪೊಲೀಸ್ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಐವರು ಸಾವನ್ನಪ್ಪಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಸೇನಾ ಸಿಬ್ಬಂದಿ ಮೂವರು ಉಗ್ರರರನ್ನು ಹತ್ಯೆಗೈದಿದ್ದರು.
ದಾಳಿ ನಡೆಸಿರುವ ಮೂವರು ಉಗ್ರರು ಗನ್ ಹಿಡಿದುಕೊಂಡು ಪೊಲೀಸ್ ಠಾಣೆಯತ್ತ ಸಾಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ದಾಳಿ ಮಾಡಿದ್ದು, ಅವರು ತೆಗೆದುಕೊಂಡು ಬಂದಿದ್ದ ಜಿಪಿಎಸ್ ನಿಂದಾಗಿ ಇವರು ಪಾಕಿಸ್ತಾನದ ಮೂಲದವರು ಎಂದು ಹೇಳಲಾಗುತ್ತಿದೆ.