ಆಪ್ ವಿರುದ್ಧ ಬಿಜೆಪಿ ಜಾಹೀರಾತು ಪ್ರಚಾರದ ಚಿತ್ರ (ಫೋಟೋ ಕೃಪೆ: ಎಎನ್ಐ) 
ದೇಶ

ಆಪ್ ಜಾಹೀರಾತು ಪ್ರಚಾರದ ವೆಚ್ಚ ಪ್ರಶ್ನಿಸಿದ ಬಿಜೆಪಿ

ಆಮ್ ಆದ್ಮಿ ಪಕ್ಷದ ಜಾಹೀರಾತು ಪ್ರಚಾರ ಹಲವು ವಿವಾದಕ್ಕೆ ಸಿಲುಕಿರುವ ಹಿನ್ನೆಲೆಯಲ್ಲೇ ಇದೀಗ ಬಿಜೆಪಿ ಸಹ ಆಪ್ ವಿರುದ್ಧ ಜಾಹೀರಾತು ಪ್ರಚಾರಕ್ಕಿಳಿದಿದ್ದು, ಜಾಹೀರಾತು ಪ್ರಚಾರಕ್ಕೆ ಖರ್ಚು ಮಾಡಿರುವ ಹಣದ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದೆ...

ನವದೆಹಲಿ: ಆಮ್ ಆದ್ಮಿ ಪಕ್ಷದ ಜಾಹೀರಾತು ಪ್ರಚಾರ ಹಲವು ವಿವಾದಕ್ಕೆ ಸಿಲುಕಿರುವ ಹಿನ್ನೆಲೆಯಲ್ಲೇ ಇದೀಗ ಬಿಜೆಪಿ ಸಹ ಆಪ್ ವಿರುದ್ಧ ಜಾಹೀರಾತು ಪ್ರಚಾರಕ್ಕಿಳಿದಿದ್ದು, ಜಾಹೀರಾತು ಪ್ರಚಾರಕ್ಕೆ ಖರ್ಚು ಮಾಡಿರುವ ಹಣದ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದೆ.

ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿ ಸರ್ಕಾರವು ಹಣಕಾಸು ವರ್ಷದಲ್ಲಿ ತನ್ನ ಸಾಧನೆ ಪ್ರಚಾರಕ್ಕಾಗಿ 526 ಕೋಟಿ ಹಣ ಖರ್ಚು ಮಾಡಿತ್ತು. ಕೇಜ್ರಿವಾಲ್ ಸರಕಾರವು ತನ್ನ ಪ್ರಚಾರ ಕಾರ‌್ಯಗಳಿಗಾಗಿ ಜನರ ಹಣವನ್ನು ಬಳಸಿಕೊಳ್ಳುವ ಮೂಲಕ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಹೇಳಿ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ಈ ಹಿಂದಷ್ಟೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ವಿರುದ್ಧ ಜಾಹೀರಾತು ಪ್ರಚಾರ ಮಾಡಿದ್ದರು. ಮೋದಿ ಅವರೇ ನಮ್ಮ ಕೆಲಸದಲ್ಲಿ ಮಧ್ಯೆ ಪ್ರವೇಶಿಸದೆ, ನಮ್ಮನ್ನು ಕೆಲಸ ಮಾಡಲು ಬಿಡಿ ಎಂದು ಹೇಳಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಜಾಹೀರಾತು ಪ್ರಚಾರ ಮಾಡಿತ್ತು.

ಇದೀಗ ಆಪ್ ಸರ್ಕಾರದ ಜಾಹೀರಾತು ಪ್ರಚಾರದ ಹಾದಿಯನ್ನೇ ಬಿಜೆಪಿ ಸಹ ಹಿಡಿದಿದ್ದು, ಕೇಜ್ರಿವಾಲ್ ರನ್ನು ಪ್ರಶ್ನಿಸಿ ದೆಹಲಿಯಾದ್ಯಂತ ಹಲವಾರು ಜಾಹೀರಾತು ಫಲಕಗಳನ್ನು ಹಾಕಿದೆ. ಬಿಜೆಪಿ ಪ್ರಕಟಿಸಿರುವ ಜಾಹೀರಾತಿನಲ್ಲಿ  ಪ್ರಚಾರಕ್ಕೆ ಖರ್ಚು ಮಾಡಿದ 526ಕೋಟಿ ಹಣವನ್ನು ಏನು ಮಾಡಿದಿರಿ ಎಂದು ಪ್ರಶ್ನಿಸಿದೆ. ಅಲ್ಲದೆ, ತಾವು ಪ್ರಚಾರಕ್ಕೆ ಖರ್ಚು ಮಾಡಿದ ಈ ಹಣದಲ್ಲಿ ಮಹಿಳೆಯರ ಸುರಕ್ಷೆಗಾಗಿ 5 ಲಕ್ಷ ಕ್ಯಾಮೆರಾಗಳನ್ನು ನಗರದಲ್ಲೆಡೆ ಹಾಕಬಹುದಿತ್ತು. 200 ಶಾಲೆಗಳು ಹಾಗೂ 50 ಹೊಸ ಕಾಲೇಜುಗಳನ್ನು ತೆರೆಬಹುದಿತ್ತು. 1000 ಕಾಲೋನಿಗಳ ಜನತೆಗೆ ಶುದ್ಧ ನೀರು ಕೊಡಬಹುದಿತ್ತು. ಇಷ್ಟೊಂದು ಹಣವನ್ನು ಅನಾವಶ್ಯಕವಾಗಿ ಹಾಳುಮಾಡಲಾಗಿದೆ. ನಮ್ಮ ಪ್ರಶ್ನೆಗೆ ಉತ್ತರ ಕೊಡಿ ಎಂದು ಕೇಳಿದೆ.

ಜಾಹೀರಾತು ಫಲಕಗಳ ಮೂಲಕ ಬಿಜೆಪಿ ಕೇಳಿರುವ ಪ್ರಶ್ನೆಗೆ ಉತ್ತರಿಸಲು ಆಮ್ ಆದ್ಮಿ ಪಕ್ಷ ಉತ್ತರಿಸಲು ನಿರಾಕರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!