ನವದೆಹಲಿ: ಪಂಜಾಬ್‍ನ ಗುರ್ ದಾಸ್ ಪುರ ಜಿಲ್ಲೆಯ ದಿನಾನಗರದಲ್ಲಿ ದಾಳಿ ನಡೆಸಿದ ಉಗ್ರರು ಪಾಕಿಸ್ತಾನದ ಗುಪ್ತಚರ ಇಲಾಖೆ (ಐಎಸ್‍ಐ)ಯ ತರಬೇತಿಯಲ್ಲಿ ಪಳಗಿ ದ್ದರೆಂಬ ಸ್ಫೋಟಕ ಮಾಹಿತಿ ಬಹಿರಂಗ ಗೊಂಡಿದೆ.
ಖಾಸಗಿ ಸುದ್ದಿ ವಾಹಿನಿಗೆ ಲಭಿಸಿರುವ ಸುದ್ದಿ ಪ್ರಕಾರ, ಥಾಯ್ಲೆಂಡ್ -ಮ್ಯಾನ್ ಮಾರ್ ಗಡಿಯಲ್ಲಿ 10 ದಿನಗಳ ಕಾಲ 6 ಮಂದಿ ಉಗ್ರರಿಗೆ ಐಎಸ್‍ಐ ತರಬೇತಿ ನೀಡಿತ್ತು. ಇವರಲ್ಲಿ ದಿನಾನಗರದಲ್ಲಿ ದಾಳಿ ಎಸಗಿ ಪೊಲೀಸರ ಪ್ರತಿ ದಾಳಿಯಲ್ಲಿ ಸಾವಿಗೀಡಾಗಿದ್ದರು. ಇಬ್ಬರು ಪಾಕ್ ನಲ್ಲಿ ಹತರಾಗಿದ್ದರೆ, ಒಬ್ಬನನ್ನು ಬಂಧಿಸಲಾಗಿತ್ತು. ಏತನ್ಮಧ್ಯೆ, ಮುಂಬೈ ದಾಳಿಗೂ ಗುರುದಾಸ್ಪುರ ದಾಳಿಗೂ ಅನೇಕ ಸಾಮ್ಯತೆಗಳಿವೆ ಎಂದೂ ಹೇಳಲಾಗಿದೆ.
ಪಾಕ್ ಕೈವಾಡ ಇಲ್ಲ
ರಾಜ್ಯಸಭೆಯಲ್ಲಿ ಗುರುವಾರವಷ್ಟೇ ಶತ್ರುಗಳ ದಾಳಿಗೆ ಪ್ರಬಲ ಹಾಗೂ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಭಾರತದ ರಕ್ಷಣಾ ಇಲಾಖೆ ನೀಡಲಿದೆ' ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದರು. ಆದರೆ ಅವರೆಲ್ಲೂ ಪಾಕ್‍ನ ವಿಚಾರ ಎತ್ತಿಲ್ಲ. ಎರಡೂ ದೇಶಗಳ ನಡುವಿನ ಮಾತುಕತೆ ಹಳಿತಪ್ಪಬಾರದು ಎನ್ನುವ ಕಾರಣಕ್ಕೇ ಈ ರೀತಿಯ ಹೇಳಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.