ನವದೆಹಲಿ: ಭಾರತದಲ್ಲಿ ಈ ಭಾರಿ ಶೇ 88ರಷ್ಟು ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಕೇಂದ್ರ ಭೂವಿಜ್ಞಾನ ಖಾತೆ ಸಚಿವ ಡಾ.ಹರ್ಷವರ್ಧನ್ ಕಳವಳ ವ್ಯಕ್ತಪಡಿಸಿದ್ದಾರೆ. ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ದೇಶದ ಅರ್ಧದಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗುವುದಿಲ್ಲ ಎಂದು ಹರ್ಷವರ್ಧನ್ ಆತಂಕ ವ್ಯಕ್ತ ಪಡಿಸಿದ್ದಾರೆ.
ದೇಶದ್ಯಾಂತ ಶೇ.93 ರಷ್ಟು ಸರಾಸರಿ ಮಳೆಯನ್ನು ಅಂದಾಜಿಸಲಾಗಿದ್ದು, ಶೇ 90 ಕ್ಕಿಂತಲೂ ಕಡಿಮೆ ಮಳೆಯಾದರೇ ದೇಶದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಎಲ್ಲರೂ ಬರದ ಪರಿಸ್ಥಿತಿ ಬಾರದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹರ್ಷವರ್ಧನ್ ತಿಳಿಸಿದರು.
ಒಂದು ವೇಳೆ ಮುಂಗಾರು ಮಳೆ ಪ್ರಮಾಣ ಕಡಿಮೆಯಾದರೆ ಕೇಂದ್ರ ಬ್ಯಾಂಕ್ 3 ನೇ ಬಾರಿಗೆ ಬಡ್ಡಿ ದರದಲ್ಲಿ ಕಡಿಮೆ ಮಾಡಲಿದೆ ಎಂದರು. ಹೀಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದೂ, ಜನ ಸಾಮಾನ್ಯರು ತೊಂದರೆ ಆನುಭವಿಸುವಂತಾಗಿದೆ, ಈ ಭಾರಿಯೂ ಮಳೆ ಸರಿಯಾದ ಪ್ರಮಾಣದಲ್ಲಿ ಬೀಳದಿದ್ದರೆ ಬೆಲೆಗಳು ಮತ್ತಷ್ಟು ದುಬಾರಿಯಾಗೋ ಸಾಧ್ಯತೆ ಇದೆ ಎಂದು ಹೇಳಿದರು.
ಕಳೆದ ವರ್ಷವೂ ಬೆಳೆಗಳ ಕಟಾವಿನ ಸಮಯದಲ್ಲಿ ಬಂದ ಅಕಾಲಿಕ ಮಳೆಯಿಂದ ಬೆಳೆಗಳೆಲ್ಲಾ ನಾಶವಾಗಿತ್ತು ಎಂದು ವಿವರ ನೀಡಿದರು.