ಭನ್ವರ್ ಲಾಲ್ ದೋಶಿ 
ದೇಶ

ರು.600 ಕೋಟಿ ಆಸ್ತಿ ಒಡೆಯ ಈಗ ಸನ್ಯಾಸಿ

ಪ್ಲಾಸ್ಟಿಕ್ ಕಿಂಗ್ ಎಂದೇ ಕರೆಸಿಕೊಂಡಿದ್ದ, ದೆಹಲಿ ಮೂಲದ ರು.600 ಕೋಟಿ ಮೌಲ್ಯದ ಆಸ್ತಿಯ ಒಡೆಯರೊಬ್ಬರು ತಮ್ಮ 58ನೇ ವಯಸ್ಸಿನಲ್ಲಿ...

ಅಹಮದಾಬಾದ್: ಪ್ಲಾಸ್ಟಿಕ್ ಕಿಂಗ್ ಎಂದೇ ಕರೆಸಿಕೊಂಡಿದ್ದ, ದೆಹಲಿ ಮೂಲದ ರು.600 ಕೋಟಿ ಮೌಲ್ಯದ ಆಸ್ತಿಯ ಒಡೆಯರೊಬ್ಬರು ತಮ್ಮ 58ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಒಂದು ಕಾಲದಲ್ಲಿ ರಸ್ತೆಬದಿಯ ಗಾಡಿಯಲ್ಲಿ ಮೇಣದಬತ್ತಿ ಮಾರುತ್ತಿದ್ದ ಭನ್ವರ್ ಲಾಲ್ ದೋಶಿ ಅವರು ಕೋಟ್ಯಂತರ ಮೌಲ್ಯದ ಪ್ಲಾಸ್ಟಿಕ್ ಕಂಪನಿ ಡಿ.ಆರ್. ಇಂಟರ್ ನ್ಯಾಷನಲ್ ಕಟ್ಟಿದ್ದೇ ಒಂದು ಸಾಹಸ. ಜೈನ ಸನ್ಯಾಸಿಯೊಬ್ಬರ ಪ್ರವಚನದಿಂದ ಪ್ರಭಾವಿತರಾಗಿದ್ದ ದೋಶಿ ಅವರು ಈ ಹಿಂದೆಯೇ ಸರ್ವ ಸಂಘ ಪರಿತ್ಯಾಗಿಯಾಗಲು ಹೊರಟಿದ್ದರು.

ಹೀಗೆಂದು ``ದ ಟೆಲಿಗ್ರಾಂ ಆಂಗ್ಲ ದೈನಿಕ ವರದಿ ಮಾಡಿದೆ. ಆದರೆ, ಕುಟುಂಬದವರ ಒತ್ತಡಕ್ಕೆ ಬಿದ್ದು ಸಂಸಾರ ಬಂಧನದಲ್ಲಿದ್ದರು. ಈಗ ಕುಟುಂಬದವರ ಒಪ್ಪಿಗೆ ಪಡೆದೇ ಅವರು ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದಾರೆ.

ದೋಶಿ ಅವರು ಜೈನ ಆಚಾರ್ಯ ಶ್ರೀ ಗುಣರತ್ನ ಸುರೀಶ್ವರಜೀ ಮಹಾರಾಜ್ ಅವರಲ್ಲಿ ದೀಕ್ಷೆ ಪಡೆದುಕೊಂಡಿದ್ದಾರೆ. ಅಹಮದಾಬಾದ್‍ನಲ್ಲಿ ಸುಮಾರು ಮೂರು ದಿನಗಳ ಕಾಲ ನಡೆದ ಈ ದೀಕ್ಷೆ ಕಾರ್ಯಕ್ರಮದಲ್ಲಿ 1.5 ಲಕ್ಷ ಮಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT