ರಾಧ ಮೋಹನ್ ಸಿಂಗ್ 
ದೇಶ

ಮಳೆ ಅಭಾವ ಎದುರಿಸಲು ಸರ್ಕಾರ ಸಿದ್ಧ: ರಾಧ ಮೋಹನ್ ಸಿಂಗ್

ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳ ಜತೆಗೆ ಪ್ರಸಕ್ತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಬರಗಾಲ ಎದುರಾಗುವ ಸಾಧ್ಯತೆಯಿದ್ದು...

ನವದೆಹಲಿ: ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳ ಜತೆಗೆ ಪ್ರಸಕ್ತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಬರಗಾಲ ಎದುರಾಗುವ ಸಾಧ್ಯತೆಯಿದ್ದು, ಮಳೆ ಅಭಾವವನ್ನು ಎದುರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ ಸಿಂಗ್‌ ತಿಳಿಸಿದ್ದಾರೆ.

ಕೇಂದ್ರ ಕೃಷಿ ಇಲಾಖೆಯ ಒಂದು ವರ್ಷದ ಸಾಧನೆಗಳನ್ನು ಹಂಚಿಕೊಳ್ಳಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಅಭಾವದಿಂದ ಉಂಟಾಗುವ ಆಹಾರ ಉತ್ಪಾದನೆಯ ಕೊರತೆ ಹಾಗೂ ನಂತರ ಎದುರಾಗಬಹುದಾದ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ‘ರಾಜ್ಯಗಳಿಂದ ಆಹಾರ ಉತ್ಪಾದನೆಯ ಮಾಹಿತಿಯನ್ನು ತರಿಸಿಕೊಳ್ಳಲಾಗುತ್ತಿದೆ. ಮಳೆ ಕೊರತೆ ಎದುರಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ನಡೆಸಿದೆ’ ಎಂದಿದ್ದಾರೆ.

ರೈತರ ಆದಾಯ ರಕ್ಷಣೆಯ ಉದ್ದೇಶದಿಂದ ಈ ವರ್ಷಾಂತ್ಯಕ್ಕೆ ಹೊಸ ಬೆಳೆ ವಿಮೆ ನೀತಿ ಜಾರಿಗೆ ತರಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಭಾರತದಲ್ಲಿ ಮಳೆಯ ಕಾರಣದಿಂದ ಕೃಷಿ ವಲಯದಲ್ಲಿ ಏರಿಳಿತ ಇದ್ದೇ ಇರುತ್ತದೆ. ಆದಾಗ್ಯೂ ನಮ್ಮ ನೀತಿಗಳ ಮೂಲಕ ನಷ್ಟದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ - ರಾಹುಲ್ ಗಾಂಧಿ

ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ, FIR: ಪ್ರತಾಪ್ ಸಿಂಹ ಅಭಿಪ್ರಾಯ ಅವರ ವೈಯಕ್ತಿಕ, ಪಕ್ಷದ್ದಲ್ಲ- ಯದುವೀರ್ ಒಡೆಯರ್

ನಂದಿಗ್ರಾಮ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಗೆ ಅ. 5ರವರೆಗೆ ನ್ಯಾಯಾಂಗ ಬಂಧನ!

Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ.. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!