ಬಿಬಿಸಿ ತಪ್ಪು ಟ್ವೀಟ್
`ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಮೃತಪಟ್ಟಿದ್ದಾರೆ' ಹೀಗೆಂದು ತಪ್ಪಾಗಿ ಟ್ವೀಟ್ ಮಾಡಿ ಪತ್ರಕರ್ತೆಯೊಬ್ಬರು ವಿವಾದಕ್ಕೆಡೆ ಮಾಡಿದ್ದಾರೆ. ಬಿಬಿಸಿ ಉರ್ದು ಸುದ್ದಿ...
ಲಂಡನ್: `ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಮೃತಪಟ್ಟಿದ್ದಾರೆ' ಹೀಗೆಂದು ತಪ್ಪಾಗಿ ಟ್ವೀಟ್ ಮಾಡಿ ಪತ್ರಕರ್ತೆಯೊಬ್ಬರು ವಿವಾದಕ್ಕೆಡೆ ಮಾಡಿದ್ದಾರೆ. ಬಿಬಿಸಿ ಉರ್ದು ಸುದ್ದಿ ವಾಹಿನಿಯ ವರದಿಗಾರ್ತಿ ಅಹ್ಮೆನ್ ಖವಾಜಾ ಅವರೇ ಈ ಟ್ವೀಟ್ ಮಾಡಿದ್ದು, `ಬ್ರೇಕಿಂಗ್: ರಾಣಿ ಎಲಿಜಬೆತ್ ಅವರು ಕಿಂಗ್ ಎಡ್ವರ್ಡ್ 7 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಸಿ ವರ್ಲ್ಡ್ ' ಎಂದು ಕೂಡ ಟ್ವೀಟ್ ಮಾಡಿದ್ದಾರೆ. ಮೊದಲ ಟ್ವೀಟ್ನ್ನು ಅಳಿಸಿ ಹಾಕಿದ ಖವಾಜಾ, `ರಾಣಿ ಸತ್ತಿರುವುದು ಹುಸಿ ಸುದ್ದಿಯಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಮರು ಟ್ವೀಟ್ ಮಾಡಿದ್ದಾರೆ. ನಿಧನವಾರ್ತೆ ಹಾಕುವುದನ್ನು ತಾಂತ್ರಿಕವಾಗಿ ಅಭ್ಯಾಸ ಮಾಡುತ್ತಿದ್ದಾಗ ತಪ್ಪಿ ಬಿಬಿಸಿ ವರದಿಗಾರ್ತಿಯ ಟ್ವಿಟರ್ ಖಾತೆಯಿಂದ ರಾಣಿಯ ನಿಧನ ವಾರ್ತೆ
ಪ್ರಕಟವಾಗಿತ್ತು ಎಂದು ಬಿಬಿಸಿ ವಕ್ತಾರ ತಿಳಿಸಿದ್ದಾರೆ. ಟ್ವೀಟ್ಗಳನ್ನು ತಕ್ಷಣವೇ ತೆಗೆದುಹಾಕಲಾಗಿದ್ದು, ನಮ್ಮಿಂದಾದ ತಪ್ಪಿಗೆ ಕ್ಷಮೆ ಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ. ರಾಣಿ ಎಲಿಜಬೆತ್ ನಿಯಮಿತ ಆರೋಗ್ಯ ತಪಾಸಣೆ ಗಾಗಿ ಆಸ್ಪತ್ರೆ ಗೆ ತೆರಳಿದ್ದರು
ಎಂದು ಬಂಕಿಂಗ್ಹ್ಯಾಮ್ ಅರಮನೆ ವಕ್ತಾರತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.