ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪ್ರಾದೇಶಿಕ ಸಮಾನತೆ ಕಾಪಾಡುವಲ್ಲಿ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ ಎಂದು ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ.
ಕಣಿವೆ ರಾಜ್ಯದಲ್ಲಿ ಪಾಕಿಸ್ತಾನ ಧ್ವಜಗಳು ಕಾಶ್ಮೀರದಲ್ಲಿ ರಾರಾಜಿಸುತ್ತಿವೆ. ಹಾಗೂ ಕಾಲಿಸ್ತಾನಿ ಪೋಸ್ಟರ್ ಜಮ್ಮುವಿನಲ್ಲಿ ಯಾವುದೇ ಎಗ್ಗಿಲ್ಲದೆ ಅಂಟಿಸಲಾಗುತ್ತಿದೆ ಎಂದು ಟ್ವೀಟರ್ ನಲ್ಲಿ ಆರೋಪಿಸಿದ್ದಾರೆ.
ಜಮ್ಮುವಿನಲ್ಲಿ ಕಾಲಿಸ್ತಾನಿ ನಾಯಕ ಜರ್ನೈಲ್ ಸಿಂಗ್ ಭಿಂದ್ರಾವಾಲೆ ಪೋಸ್ಟರ್ ತೆರವುಗೊಳಿಸಿದ ಸಂಬಂಧ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದವರಿಗೆ ಟ್ವೀಟರ್ ನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ನಿನ್ನೆ ನಡೆದ ಘರ್ಷಣೆಯಲ್ಲಿ ಒಬ್ಬ ಯುವಕ ಸಾವನ್ನಪ್ಪಿ, ಮೂವರು ಪೊಲೀಸರು ಹಾಗೂ ಮೂವರು ಸ್ಥಳೀಯರು ಗಾಯಗೊಂಡಿದ್ದರು.
ಇನ್ನು ಜಮ್ಮುಗೆ ಮಂಜೂರಾಗಿರುವ ಏಮ್ಸ್ ಅನ್ನು ಶೀಘ್ರವೇ ಆರಂಭಿಸಬೇಕೆಂದು ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯ್ಯೀದ್ ಗೆ ಒಮರ್ ಆಬ್ದುಲ್ಲಾ ಆಗ್ರಹಿಸಿದ್ದಾರೆ.