ಮರಳು ಮಾಫಿಯಾ ತಂಡ ಮಾಡಿದ ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿಗಳು 
ದೇಶ

ಮಹಿಳಾ ಪೊಲೀಸ್ ಮೇಲೆ ಮರಳುಗಳ್ಳರ ದಾಳಿ

ಇದು ಪಕ್ಕಾ ಸಿನಿಮೀಯ ಮಾದರಿಯ ಗೂಂಡಾಗಿರಿ ಘಟನೆ. ಮಧ್ಯಪ್ರದೇಶದ ಷಜಾಪುರದಲ್ಲಿ ಮರಳು ಮಾಫಿಯಾ ತಂಡದ ಮೇಲೆ ದಾಳಿ ಮಾಡಿದ ಮಹಿಳಾ ಗಣಿ ಇನ್ಸ್ ಪೆಕ್ಟರ್ ಹಾಗೂ ಎಂಟು ಮಂದಿ ಗೃಹರಕ್ಷಕ ದಳದವರ ಮೇಲೆ ಪ್ರತಿದಾಳಿ ನಡೆಸಿ ಹಲ್ಲೆ ಮಾಡಲಾಗಿದೆ...

ಭೋಪಾಲ್: ಇದು ಪಕ್ಕಾ ಸಿನಿಮೀಯ ಮಾದರಿಯ ಗೂಂಡಾಗಿರಿ ಘಟನೆ. ಮಧ್ಯಪ್ರದೇಶದ ಷಜಾಪುರದಲ್ಲಿ ಮರಳು ಮಾಫಿಯಾ ತಂಡದ ಮೇಲೆ ದಾಳಿ ಮಾಡಿದ ಮಹಿಳಾ ಗಣಿ
ಇನ್ಸ್ ಪೆಕ್ಟರ್ ಹಾಗೂ ಎಂಟು ಮಂದಿ ಗೃಹರಕ್ಷಕ ದಳದವರ ಮೇಲೆ ಪ್ರತಿದಾಳಿ ನಡೆಸಿ ಹಲ್ಲೆ ಮಾಡಲಾಗಿದೆ.

ನೀವಜ್ ನದಿ ದಂಡೆಯಿಂದ ಮರಳು ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಹಾಯವಾಣಿ ಸಂಖ್ಯೆಯಿಂದ ದೂರು ಕರೆ ಬಂದಾಗ, ಕಾರ್ಯಪ್ರವೃತ್ತರಾದ ಇನ್ಸ್ ಪೆಕ್ಟರ್ ರೀನಾ ಪಾಠಕ್ ತಮ್ಮ ತಂಡದೊಂದಿಗೆ ದಾಳಿ ನಡೆಸಿದ್ದಾರೆ. ಮರಳು ತುಂಬಿದ್ದ ನಾಲ್ಕು ಟ್ರಾಕ್ಟರ್‍ಗಳನ್ನು ವಶಪಡಿಸಿಕೊಳ್ಳುತ್ತಿದ್ದ ಹಾಗೆ, ಚಾಲಕರು ಹಾಗೂ ಇತರರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ದೊಡ್ಡ ಗ್ಯಾಂಗಿನೊಂದಿಗೆ ವಾಪಸ್ಸಾದ ತಂಡ ಮಾರಕಾಸ್ತ್ರ ಹಾಗೂ ಕಲ್ಲುಗಳೊಂದಿಗೆ ಪೊಲೀಸ್ ತಂಡದ ಮೇಲೆರಗಿದೆ.

ತಕ್ಷಣ ಅವರು ಅಲ್ಲಿಂದ ಓಡಿದ ಕಾರಣ ಪ್ರಾಣ ಉಳಿದಿದೆ ಜಿಲ್ಲಾ ಆಡಳಿತಾಧಿಕಾರಿ ಮಾತ್ರ ತಮಗೆ ಮಾಹಿತಿ ನೀಡದೇ ಏಕಾಏಕಿ ದಾಳಿ ಮಾಡಿದ್ದು ಪೊಲೀಸ್ ತಂಡದ ತಪ್ಪು. ಇದರಿಂದಲೇ ಪ್ರತಿದಾಳಿಗೆ ತುತ್ತಾಗಿದ್ದಾರೆ ಎಂದು ಮಹಿಳಾ ಪೊಲೀಸ್ ಪಾಠಕ್ ರನ್ನು ದೂರಿದ್ದಾರೆ.

ಮತ್ತೊಂದು ಸಿನಿಮೀಯ ಅಪಹರಣ
ನವದೆಹಲಿ: ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮರಳು ದಂಧೆಯ ಜಾಡು ಹಿಡಿದು ವಾಹನ ತಪಾಸಣೆಗೆ ನಿಂತಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನೇ ಅಪಹರಿಸಲಾಗಿದೆ.
ವಾಹನ ದಾಖಲೆ ತಪಾಸಣೆಗೆ ಟ್ರಕ್ ಅನ್ನು ತಡೆನಿಲ್ಲಿಸಿದಾಗ, ಪೊಲೀಸ್‍ನನ್ನು ಅಪಹರಿಸಿ ಹೊತ್ತೊಯ್ಯಲಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಹಲವು ಪಿಸಿಆರ್ ವ್ಯಾನ್‍ಗಳು ಟ್ರಕ್ ಹೋಗುತ್ತಿರುವ ಮಾರ್ಗ ಕಂಡುಹಿಡಿದು, ಹತ್ತು ಕಿಲೋಮೀಟರ್ ಚೇಸ್ ಮಾಡಿ ಟ್ರಕ್‍ನ ಟೈರ್‍ಗಳಿಗೆ ಶೂಟ್ ಮಾಡಿ ಗಾಳಿ ತೆಗೆಯುವ ಮೂಲಕ ನಿಲ್ಲಿಸಿದ್ದಾರೆ. ಕೊನೆಗೂ ಪೊಲೀಸ್‍ನನ್ನು ರಕ್ಷಿಸಿ ಡ್ರೈವರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!