ದೇಶ

ಇನ್ನಷ್ಟು ಫಾಸ್ಚ್ ಫುಡ್ ಗಳ ಪರೀಕ್ಷೆ

Sumana Upadhyaya

ನವದೆಹಲಿ:  ಮ್ಯಾಗಿ ನೂಡಲ್ಸ್ ಆಹಾರದ ಗುಣಮಟ್ಟ ಕುರಿತು ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ  ಕೇಂದ್ರ ಆಹಾರ ಸುರಕ್ಷತಾ ಪ್ರಾಧಿಕಾರವು, ಆಹಾರ ತಯಾರಿಕೆಯಲ್ಲಿನ ಸೂತ್ರಗಳ ಅನುಸರಣೆ ಪರಿಶೀಲಿಸಿ ರಾಮೆನ್ , Foodles ಮತ್ತು ವಾಯ್ ವಾಯ್  ಸೇರಿದಂತೆ ಪ್ರಮುಖ ಏಳು ಕಂಪೆನಿಗಳಿಂದ ತಯಾರಿಸಲ್ಪಟ್ಟ  ವಿವಿಧ ನೂಡಲ್ಸ್ , ಪಾಸ್ತಾ ಮತ್ತು ತಿಳಿಹಳದಿ ಬ್ರ್ಯಾಂಡ್ ಗಳ  ಪರೀಕ್ಷೆಗೆ ಆದೇಶಿಸಿದೆ.

ಮ್ಯಾಗಿ ಪಾಸ್ತಾದ ನಾಲ್ಕು ಪ್ರಮುಖ ವಿಧಗಳನ್ನು ಸಹ ಪರೀಕ್ಷೆಗೆ ಒಳಪಡಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚಿಸಿದೆ.ಮ್ಯಾಗಿ ಹಾಗೂ ಇತರ ಕೆಲವು ಪ್ರಮುಖ ತ್ವರಿತ(instant) ಆಹಾರಗಳ ಬಗ್ಗೆ ಮತ್ತು ಅವು ಮನುಷ್ಯರ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿವೆ. ಇವುಗಳ ಸ್ಯಾಂಪಲ್ ಗಳನ್ನು ಸಂಬಂಧಪಟ್ಟ ಪ್ರಯೋಗಾಲಯಕ್ಕೆ ಪರೀಕ್ಷೆಗೆ  ಕಳುಹಿಸಬೇಕೆಂದು ಆಹಾರ ಸುರಕ್ಷತಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ ವೈ.ಎಸ್.ಮಲಿಕ್ ಅವರು, ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರಿಗೆ ತಿಳಿಸಿದ್ದಾರೆ.

ಇದರ ಭಾಗವಾಗಿ, ನೆಸ್ಲೆ ಇಂಡಿಯಾ, ಐಟಿಸಿ, ಇಂಡೋ ನೆಸ್ಸಿನ್ ಫುಡ್, ಜಿಎಸ್ ಕೆ ಕನ್ಯ್ಸೂಮರ್ ಹೆಲ್ತ್ ಕೇರ್, ಸಿಜಿ ಫುಡ್ಸ್ ಇಂಡಿಯಾ,ರುಚಿ ಇಂಟರ್ ನ್ಯಾಶನಲ್ ಮತ್ತು  ಮತ್ತು  ಎಎ ನ್ಯೂಟ್ರಿಶನ್ ಕಂಪೆನಿಗಳಿಗೆ ಸ್ಯಾಂಪಲ್ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಪ್ರಾಧಿಕಾರದಲ್ಲಿ ದಾಖಲು ಮಾಡಿಕೊಂಡಿರುವ ಕಂಪೆನಿಗಳಿಗೆ ಈ ನೊಟೀಸು ಹೋಗಿದೆ.

ಇನ್ಸ್ಟೆಂಟ್ ಆಹಾರಗಳಾದ ವಾಯ್-ವಾಯ್ ನೂಡಲ್ಸ್, ಬುಜಿಯಾ ಚಿಕನ್, ನೆಸ್ಲೆ ಮ್ಯಾಗಿಯ 9 ತರಹದ ಪದಾರ್ಥಗಳು, ಯಮ್ಮಿ ಚಿಕನ್ಸ್ ಮೊದಲಾದ ಆಹಾರ ಪದಾರ್ಥಗಳು ಪರೀಕ್ಷೆಗೊಳಪಡಲಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಜಿ ಫುಡ್ಸ್ ನ ಮುಖ್ಯ ಕಾರ್ಯನಿರ್ವಾಪಕ ಅಧಿಕಾರಿ ಜಿಪಿ ಸಾ, ಆಹಾರ ಸುರಕ್ಷತಾ ಪ್ರಾಧಿಕಾರವು ನೀಡಿರುವ ನಿಯಮಗಳನ್ನು ನಾವು ಪಾಲಿಸಿದ್ದೇವೆ. ಆದರೂ ಅಗತ್ಯವಿದ್ದರೆ ನಮ್ಮ ಉತ್ಪನ್ನವನ್ನು ಪರೀಕ್ಷೆಗೆ ಒಳಪಡಿಸಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.

ಮ್ಯಾಗಿಯ ಎಲ್ಲಾ ಉತ್ಪನ್ನಗಳನ್ನು ನಿಷೇಧಿಸಿ ಮಾರುಕಟ್ಟೆಯಿಂದ ಹಿಂಪಡೆದ ಬೆನ್ನಲ್ಲೇ ಆಹಾರ ಸುರಕ್ಷತಾ ಪ್ರಾಧಿಕಾರ ಈ ಕ್ರಮಕ್ಕೆ ಮುಂದಾಗಿದೆ.

SCROLL FOR NEXT