ದೇಶ

ವಿಮಾನದ ತುರ್ತು ಭೂಸ್ಪರ್ಶಕ್ಕೆ ಕಾರಣವಾದ ಜೇನ್ನೊಣ

Rashmi Kasaragodu

ಲಂಡನ್: ಹಕ್ಕಿಗಳು ಡಿಕ್ಕಿ ಹೊಡೆದಾಗ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಸುದ್ದಿಯನ್ನು ನಾವು ಕೇಳಿಯೇಇದ್ದೇವೆ. ಆದರೆ, ಸಾಮಾನ್ಯ ಜೇನು ನೊಣವೊಂದುಟೇಕ್ ಆಫ್ ಆದ ವಿಮಾನವೊಂದನ್ನು ಮತ್ತೆ ನೆಲಸ್ಪರ್ಶಿಸುವಂತೆ ಮಾಡುವ ಸಾಮರ್ಥ್ಯ ಇದೆಯಾ? ಹೌದೆನ್ನುತ್ತಾರೆ ಯುರೋಪ್‍ನ ಫ್ಲೈಬೀ ಏರ್‍ಲೈನ್ಸ್ ಸಿಬ್ಬಂದಿ. ಸೌತ್ ಹ್ಯಾಂಪ್ಟನ್‍ನಿಂದ ಡಬ್ಲಿನ್‍ಗೆ ಹೊರಟಿದ್ದ ಬೋಯಿಂಗ್ 384 ವಿಮಾನವೊಂದುಈ ಅನಪೇಕ್ಷಿತ ಪ್ರಯಾಣಿಕನಿಂದಾಗಿ ವಾಪಸ್ ಭೂಸ್ಪರ್ಶ ಮಾಡಬೇಕಾಯಿತಂತೆ. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಅದರ ನ್ಯಾವಿಗೇಷನ್‍ನಲ್ಲಿ ತಾಂತ್ರಿಕ ತೊಂದರೆ  ಕಾಣಿಸಿಕೊಂಡಂತಾಯಿತು. ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ವಿಮಾನವನ್ನು ಮತ್ತೆ ನಿಲ್ದಾಣದತ್ತ ತಿರುಗಿಸಿದ್ದಾನೆ. ಸಂಸ್ಥೆಯ ಎಂಜಿನಿಯರ್‍ಗಳು ವಿಮಾನವನ್ನು ಪರಿಶೀಲಿಸಿದಾಗಲೇ ಸಮಸ್ಯೆಯ ನಿಜವಾದ ಕಾರಣ ಏನೆಂಬುದು ಪತ್ತೆಯಾದದ್ದು. ವಿಮಾನ ಹೊರಗೆ ಅಳವಡಿಸಲಾಗಿದ್ದ ಸಾಧನದೊಳಗೆ ಈ ಅನಪೇಕ್ಷಿತ ಅತಿಥಿ ಸೇರಿಕೊಂಡಿತ್ತು. ಆದರೆ, ಗಾಳಿಯ ಘರ್ಷಣೆಗೆ ಅದು ಅಲ್ಲೇ ಮೃತಪಟ್ಟಿತ್ತು.
ನಂತರ ಎಂಜಿನಿಯರ್‍ಗಳು ಅದರ ಅವಶೇಷಗಳನ್ನು ಹೊರತೆಗೆದು ವಿಮಾನ ಹಾರಾಟಕ್ಕೆ ಹಸಿರುನಿಶಾನೆ ತೋರಿದ್ದಾರೆ. ಈ ಜೇನುನೊಣದಿಂದಾಗಿ ವಿಮಾನ ಪ್ರಮಾಣ ಸುಮಾರು ಎರಡು ಗಂಟೆ ವಿಳಂಬವಾಯಿತು.

200ಕ್ಕೂ ಹೆಚ್ಚು ಜೀವ ತೆಗೆದಿವೆ: ಅಯ್ಯೋ ಜೇನುನೊಣದಿಂದ ಏನು ಸಮಸ್ಯೆಯಾದೀತು ಎಂದು ಯಾವುದೇ ಪೈಲಟ್ ಹಗುರವಾಗಿ ಮಾತನಾಡುವಂತಿಲ್ಲ.ಯಾಕೆಂದರೆ 1996ರಲ್ಲಿ ಕಣಜದ ಹುಳುಗಳಿಂದಾಗಿ ಬೋಯಿಂಗ್ 757 ವಿಮಾನ ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ 189 ಮಂದಿ ಮೃತಪಟ್ಟಿದ್ದರು. ಹುಳುಗಳು ಡೊಮಿನಿಕನ್ ರಿಪಬ್ಲಿಕ್‍ನ ವಿಮಾನದ ಪಿಟಾಟ್ ಟ್ಯೂಬ್(ಗಾಳಿಯ ವೇಗ ಅಳೆಯುವ ಸಾಧನ)ನ ಒಳ ಸೇರಿಕೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು. ಇನ್ನು 1980ರಲ್ಲಿ ಇದೇ ರೀತಿಯ ಪ್ರಕರಣದಿಂದಾಗಿ ಫ್ಲೋರಿಡಾದ ವಿಮಾನವೊಂದು ಅಪಘಾತಕ್ಕೀಡಾಗಿ 34
ಮಂದಿ ಮೃತಪಟ್ಟಿದ್ದರು.

SCROLL FOR NEXT