ನರೇಂದ್ರ ಮೋದಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಜತೆ 
ದೇಶ

ಮಹಿಳೆಯರ ಬಗ್ಗೆ ಪಿಎಂ ಮೋದಿ ಹೇಳಿಕೆಗೆ ಟೀಕೆ

ಬಾಂಗ್ಲಾದೇಶದ ಯಶಸ್ವಿ ಪ್ರವಾಸದ ಕೊನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯೊಂದು ವಿವಾದ ಮೂಡಿಸಿದೆ...

ನವದೆಹಲಿ: ಬಾಂಗ್ಲಾದೇಶದ ಯಶಸ್ವಿ ಪ್ರವಾಸದ ಕೊನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯೊಂದು ವಿವಾದ ಮೂಡಿಸಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಭಯೋತ್ಪಾದನೆ ನಿಗ್ರಹ ಕುರಿತು ಕೈಗೊಂಡಿ ರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, `ಮಹಿಳೆಯಾ ಗಿದ್ದರೂ ಹಸೀನಾ ಅವರ ಕ್ರಮಗಳು ಶ್ಲಾಘನೀಯ' ಎಂದು ಎಂದಿದ್ದರು. ಆದರೆ, `ಮಹಿಳೆಯಾಗಿದ್ದರೂ...' ಎಂಬ ಪದಬಳಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ. ಮಹಿಳೆಯಾದ ಮಾತ್ರಕ್ಕೆ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವಿಲ್ಲವೆ ಎಂಬ ಪ್ರಶ್ನೆಗಳು ಕೇಳಿಬಂದಿವೆ. `ಮಹಿಳೆಯಾಗಿದ್ದರೂ ಕಿರಣ್ ಬೇಡಿ ದೆಹಲಿಯಲ್ಲಿ ಬಿಜೆಪಿಯನ್ನು ಮುಳುಗಿಸಿದರು' ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, `ಮಹಿಳೆಯಾಗಿದ್ದರೂ ಬೆಳಗ್ಗೆದ್ದೆ ಮತ್ತು ತಿಂಡಿ ತಿಂದೆ' ಅಂತ ಒಬ್ಬ ಗೃಹಿಣಿ, `ಮಹಿಳೆಯಾಗಿ ದ್ದರೂ ನಿನ್ನ ಮುಖ ಛಿದ್ರವಾಗುವಂತೆ ಏಟು ನೀಡಬಲ್ಲೆ' ಅಂತ ಇನ್ನೊಬ್ಬ ಹೆಣ್ಣುಮಗಳು, `ಮಹಿಳೆಯರು ಭಯೋತ್ಪಾದನೆಯನ್ನು ಸಹಿಸಿಕೊಳ್ಳುತ್ತಾರೆ ಎಂಬುದು ನಿಮ್ಮ ಮಾತಿನ ಅರ್ಥವೆ?' ಎಂದು ಯುವತಿಯೊಬ್ಬರು ಖಾರವಾಗಿ ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳೂ ಮೋದಿ ಹೇಳಿಕೆ ಕುರಿತು ವರದಿಗಳನ್ನು ಪ್ರಕಟಿಸಿದ್ದು,`ಭಾರತೀಯ ಪ್ರಧಾನಿ ಇದೀಗ ಜಗತ್ತಿನ ಅತಿ ಕಳಪೆ ಮೆಚ್ಚುಗೆಮಾತು ಹೇಳಿದ್ದಾರೆ' ಎಂಬ ಶೀರ್ಷಿಕೆಯಡಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ
ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!