ದೇಶ

ಕೇರಳ ಹಣಕಾಸು ಸಚಿವರಿಗೆ ಸುಳ್ಳು ಪತ್ತೆ ಪರೀಕ್ಷೆ ಮಾಡಿಸಿ: ಸಿಪಿಎಂ ಆಗ್ರಹ

Shilpa D

ತಿರುವನಂತಪುರ: ಬಾರ್ ಗಳಿಗೆ ಅನುಮತಿ ನೀಡಿಲು ಲಂಚ ಪಡೆದ ಆರೋಪ ಎದುರಿಸುತ್ತಿರುವ ಕೇರಳ ಹಣಕಾಸು ಸಚಿವ ಕೆ.ಎಂ.ಮಾಣಿ ಅವರಿಗೆ ಸುಳ್ಳುಪತ್ತೆ ಪರೀಕ್ಷೆ ಮಾಡಿಸುವ ಅವಶ್ಯಕತೆಯಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡೆಯೇರಿ ಬಾಲಕೃಷ್ಣನ್ ಆಗ್ರಹಿಸಿದ್ದಾರೆ.

ಬಾರ್ ಲಂಚ ಪ್ರಕರಣ ಕೇರಳ ವಿಧಾನಸಭೆಯ 14 ನೇ  ಅಧಿವೇಶನದ ಮೊದಲನೇ ದಿನವೇ ಕೋಲಾಹಲ ಸೃಷ್ಠಿಸಿದೆ. ಹಣಕಾಸು ಸಚಿವ ಕೆ.ಎಂ ಮಾಣಿ ಮತ್ತು ಅಬಕಾರಿ ಸಚಿವ ಕೆ.ಬಾಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷ ಎಲ್ ಡಿಎಫ್ ಒತ್ತಾಯಿಸಿದೆ.

ಮಾರ್ಟ್ 13 ರಂದು ನಡೆದ ಬಜೆಟ್ ಅಧಿವೇಶನದಲ್ಲಿ ಕೇರಳ ವಿಧಾನಸಭೆ ರಣರಂಗವಾಗಿ ಮಾರ್ಪಟ್ಟಿತ್ತು. ಬಾರ್ ಲಂಚ ಪ್ರಕರಣ ಸಂಬಂಧಿಸಿದಂತೆ ಸಚಿವರಾದ ಕೆ.ಎಂ ಮಾಣಿ ಮತ್ತು ಕೆ ಬಾಬು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿರೋಧ ಪಕ್ಷದವರು ಶಾಸನ ಸಭೆಯಲ್ಲಿ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದರು.

ಗೃಹ ಸಚಿವ ರಮೇಶ್ ಚೆನ್ನಿತ್ತಾಲ ವಿರೋಧ ಪಕ್ಷದವರ ಆರೋಪವನ್ನು ತಳ್ಳಿ ಹಾಕಿದ್ದರು. ಜೊತೆಗೆ ಪ್ರಕರಣ ಸಂಬಂಧ ಸಮಿತಿಯೊಂದನ್ನು ನೇಮಿಸಿ ತನಿಖೆಗೆ ಆದೇಶಿಸಿದ್ದರು.  ಸದ್ಯದಲ್ಲಿ ತನಿಖೆ ಅಂತಿಮ ಹಂತ ತಲುಪಿದ್ದು, ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ತನಿಖಾ ತಂಡ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ಚೆನ್ನಿತಾಲ ಹೇಳಿದ್ದಾರೆ.

SCROLL FOR NEXT