ಮುಂಬೈ ಹೈಕೋರ್ಟ್ ಮೊರೆ ಹೋಗಿರುವ ನೆಸ್ಲೆ ಕಂಪೆನಿ 
ದೇಶ

ಮ್ಯಾಗಿ ವಿವಾದ: ಮುಂಬೈ ಹೈಕೋರ್ಟ್ ಮೊರೆ ಹೋದ ನೆಸ್ಲೆ ಕಂಪೆನಿ

ಮ್ಯಾಗಿ ನೂಡಲ್ಸ್ ನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನೂಡಲ್ಸ್ ಗಳ ಗುಣಮಟ್ಟ ಕುರಿತು ನ್ಯಾಯಾಂಗ ಪರಾಮರ್ಶೆ ನಡೆಸುವಂತೆ ನೆಸ್ಲೆ ಇಂಡಿಯಾ ಕಂಪೆನಿ ಮುಂಬೈ ಹೈಕೋರ್ಟ್ ಮೊರೆ ಹೋಗಿದೆ...

ನವದೆಹಲಿ:ಮ್ಯಾಗಿ ನೂಡಲ್ಸ್ ನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ(ಎಫ್ಎಸ್ಎಸ್ಎ) ಆದೇಶ ನೀಡಿರುವ ಹಿನ್ನೆಲೆಯಲ್ಲಿ ನೂಡಲ್ಸ್ ಗಳ ಗುಣಮಟ್ಟ ಕುರಿತು ನ್ಯಾಯಾಂಗ ಪರಾಮರ್ಶೆ ನಡೆಸುವಂತೆ ನೆಸ್ಲೆ ಇಂಡಿಯಾ ಕಂಪೆನಿ ಮುಂಬೈ ಹೈಕೋರ್ಟ್ ಮೊರೆ ಹೋಗಿದೆ.

ಜೂನ್ 5ರಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ  ಪ್ರಾಧಿಕಾರ ಮತ್ತು ಜೂನ್ 6ರಂದು ಆಹಾರ ಮತ್ತು ಔಷಧ ಆಡಳಿತ ಮಂಡಳಿ ನೀಡಿರುವ ಆದೇಶಗಳನ್ನು ಉಲ್ಲೇಖಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ  ಕಾಯ್ದೆ 2011ಕ್ಕೆ ವ್ಯಾಖ್ಯಾನ ನೀಡುವಂತೆ ಕಂಪೆನಿ ತನ್ನ ಅರ್ಜಿಯಲ್ಲಿ ಕೋರಿದೆ. ಇದೇ ಸಂದರ್ಭದಲ್ಲಿ ಕಂಪೆನಿ ಪ್ರಾಧಿಕಾರದ ಆದೇಶದಂತೆ ಮ್ಯಾಗಿ ನೂಡಲ್ಸ್ ನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವುದಾಗಿಯೂ ತಿಳಿಸಿದೆ.

ನೆಸ್ಲೆ ಇಂಡಿಯಾ ಕಂಪೆನಿಯ ಎಲ್ಲಾ ತರಹದ ಮ್ಸಾಗಿ ನೂಡಲ್ಸ್ ಗಳು ಮನುಷ್ಯನ ಸೇವನೆಗೆ ಅಸುರಕ್ಷಿತ ಮತ್ತು ಅಪಾಯಕಾರಿ ಎಂದು ಹೇಳಿ ಅವುಗಳ ಮಾರಾಟಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ  ಪ್ರಾಧಿಕಾರ ಕಳೆದ ವಾರ ನಿಷೇಧ ಹೇರಿತ್ತು. '2 ಮಿನಿಟ್ ಮ್ಯಾಗಿ'ಯಲ್ಲಿ ಅದರ ರುಚಿ ಹೆಚ್ಚಿಸುವ ಮೋನೊಸೋಡಿಯಂ ಗ್ಲುಟಮೇಟ್ ಮತ್ತು ಸತುವಿನ ಪ್ರಮಾಣ ಅನುಮತಿ ಮಟ್ಟಕ್ಕಿಂತ ಜಾಸ್ತಿಯಾಗಿದೆ ಎಂದು ಹೇಳಿ ಅವುಗಳ ಮಾರಾಟವನ್ನು ನಿಷೇಧಿಸಲಾಗಿತ್ತು.

ಮುಂಬೈ ಹೈಕೋರ್ಟ್ ನ ತೀರ್ಪು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ನೆಸ್ಲೆ ಕಂಪೆನಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!