ಲಾಹೋರ್: ಪಾಕಿಸ್ತಾನದಲ್ಲಿ ಮೀರಾ ಎಂದೇ ಖ್ಯಾತಿ ಗಳಿಸಿರುವ ನಟಿ ಇರ್ತಿಜ ರುಬಾಬ್ ಗೆ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಜಾರಿಮಾಡಿರುವುದಾಗಿ ತಿಳಿದುಬಂದಿದೆ.
ನಟಿ ಇರ್ತಿಜ ರುಬಾಬ್ ಸ್ವಯಂ ಘೋಷಿತ ಪತಿ ಅತೀಕ್ ವೆರ್ ಹೆಹ್ಮಾನ್ ಎಂಬುವವರು ದೂರು ದಾಖಲಿಸಿದ್ದು, ದೂರಿನಲ್ಲಿ ರುಬಾಬ್ ನನ್ನೊಂದಿಗೆ ವಿವಾಹವಾಗಿದ್ದು, ಇದೀಗ (2013ರಲ್ಲಿ)ಕ್ಯಾಪ್ಟನ್ ನವೀದ್ ಪರ್ವೇಜ್ ಎಂಬುವನೊಡನೆ ವಿವಾಹ ಒಪ್ಪಂದ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದರು.
ಈ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡ ಲಾಹೋರ್ ನ್ಯಾಯಾಲಯವು ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ರುಬಾಬ್ ಗೆ ಸೂಚನೆ ನೀಡಿದ್ದರು. ಈ ವರೆಗೂ ನಡೆದ ಯಾವೊಂದು ವಿಚಾರಣೆಗೂ ರುಬಾಬ್ ಹಾಜರಾಗಿಲ್ಲ ಎಂದು ಹೇಳಿದ್ದು, ಮುಂದಿನ ವಿಚಾರಣೆ ವೇಳೆ ರುಬಾಬ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಜು.17ಕ್ಕೆ ಮುಂದೂಡಿದೆ ಎಂದು ಹೇಳಲಾಗುತ್ತಿದೆ.