ನವದೆಹಲಿ: ಸಮಾನ ಶ್ರೇಣಿ,ಸಮಾನ ಪಿಂಚಣಿ ಯೋಜನೆಯನ್ನು ವಿಳಂಬ ಮಾಡದೇ ಶೀಘ್ರವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ನೂರಾರು ಮಂದಿ ನಿವೃತ್ತ ಯೋಧರು ದೆಹಲಿಯ ಜಂತರ್ ಮಂತರ್ ನಲ್ಲಿ ಭಾನುವಾಗ ಪ್ರತಿಭಟನೆ ನಡೆಸಿದರು.
ಭಾರತೀಯ ಮಾಜಿ ಯೋಧರ ಸಂಘಟನೆ ಪ್ರತಿಭಟನೆಯನ್ನು ಆಯೋಜಿಸಿದ್ದು, ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಪವಾಸ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಯೋಜನೆ ಜಾರಿಗೊಳಿಸುವಲ್ಲಿ ಸಚಿವರ ಸಲಹೆಗಾರರು ಕಾರಣ ಎಂದು ಸಂಘಟನೆಯ ಖಜಾಂಜಿ ವಾಯುಪಡೆಯ ಮಾಜಿ ಪೈಲಟ್ ಆರೋಪಿಸಿದ್ದಾರೆ.
ಆರ್ ಎಸ್ ಎಸ್ ಗೆ ಹತ್ತಿರವೆಂದು ಪರಿಗಣಿಸಿರುವ ನಿವೃತ್ತ ಯೋಧರ ಗುಂಪು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು, ಸಮಾನ ಶ್ರೇಣಿ,ಸಮಾನ ಪಿಂಚಣಿ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಿ 25 ಲಕ್ಷ ಮಾಜಿ ಸೈನಿಕರ ವಿಶ್ವಾಸಕ್ಕೆ ಧಕ್ಕೆ ತರಬೇಡಿ ಎಂದು ಮನವಿ ಮಾಡಿದ್ದಾರೆ.