ದೇಶ

ಅಮೆರಿಕದಲ್ಲಿ ಭಾರತದ ಹಲ್ದಿರಾಮ್ಸ್ ಗೆ ನಿಷೇಧ ಭೀತಿ

ನವದೆಹಲಿ: ಇದೀಗ ಅಮೆರಿಕದ ಆಹಾರ ಪರಿವೀಕ್ಷಕರ ಅಡಕತ್ತರಿಗೆ ಹಲ್ದಿರಾಮ್ಸ್ ಕಂಪನಿಯ ಉತ್ಪನ್ನಗಳು ಸಿಲುಕಿವೆ.

ನೆಸ್ಲೆಯ ಮ್ಯಾಗಿ ವಿವಾದಕ್ಕೆ ಗುರಿಯಾಗಿರುವ ಬೆನ್ನಲ್ಲಿ ಅಮೆರಿಕದಾದ್ಯಂತ ಭಾರತೀಯ ಖ್ಯಾದ್ಯೋತ್ಪನ್ನಗಳು ಒಂದಾದ ಮೇಲೊಂದು ಪರೀಕ್ಷೆಗೆ ಗುರಿಯಾಗುತ್ತಿವೆ. ಅಮೆರಿಕದ ಎಫ್ ಡಿಎ ಈಗಾಗಲೇ ಮೇಡ್ ಇನ್ ಇಂಡಿಯಾ ಮುದ್ರೆ ಇರುವ ನೂರಾರು ತಿನಿಸುಗಳನ್ನು ನಿಷೇಧಿತ ಪಟ್ಟಿಯಡಿಯಲ್ಲಿ ಹೆಸರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಭಾರತದಿಂದ ಬಂದಿರುವ ಹಲವು ಖ್ಯಾದ್ಯೋತ್ಪನ್ನಗಳಲ್ಲಿ ಭಾರಿ ಪ್ರಮಾಣದ ಕೀಟನಾಶಕ ಮತ್ತು ಬ್ಯಾಕ್ಟೀರಿಯಗಳು ಪತ್ತೆಯಾಗಿದ್ದು, ಹಲ್ದಿರಾಮ್ಸ್ ಸ ತಿಂಡಿಗಳೇ ಈ ಪಟ್ಟಿಯಲ್ಲಿ ಹೆಚ್ಚು ಕಾಣಿಸಿಕೊಂಡಿವೆ. ಹಲ್ದಿರಾಮ್ಸ್ ಕುಕೀಸ್, ಬಿಸ್ಕೆಟ್, ವೇಫರ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ ಎಂದು ವರದಿ ತಿಳಿಸಿದೆ.

ನಮ್ಮ  ತಿನಿಸುಗಳು ನೂರಕ್ಕೆ ನೂರು ಸುರಕ್ಷಿತ ಹಾಗೂ ಆಯಾ ನೆಲದ ಕಾನೂನಿಗೆ ಬದ್ಧವಾಗಿವೆ.'' ಎಂದು ಹಲ್ದಿರಾಮ್ಸ್ ಅಧಿಕಾರಿಯೊಬ್ಬರು ವಾಲ್ ಸ್ಟ್ರೀಟ್ ಜರ್ನಲ್‍ಗೆ ಪ್ರತಿಕ್ರಿಯಿಸಿದ್ದಾರೆ.

ಕುರ್‍ಕುರೆಗೂ ಅಗ್ನಿಪರೀಕ್ಷೆ : ಜನಪ್ರಿಯ ತಿನಿಸು ಕುರ್‍ಕುರೆ ಹಾಗೂ ಇನ್ನಿತರೆ ರೆಡಿಮೇಡ್ ಚಿಪ್ಸ್ ಗಳಿಗೂ ಈಗ ಪರೀಕ್ಷೆ ಸಮಯ. ``ಮುಂದಿನ 8ವಾರ ಸುಮಾರು ತಿನಿಸುಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದು, ಮೊದಲು ಚಿಪ್ಸ್, ಕುರ್‍ಕುರೆ, ಶಿಶುಆಹಾರಗಳು ಸರದಿಯಲ್ಲಿ ಮೊದಲಿವೆ. ಒಂದು ವಾರದೊಳಗೆ ವರದಿ ಪಡೆಯುತ್ತೇವೆ'' ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಹೇಳಿದ್ದಾರೆ. ``ಮಕ್ಕಳ ದೇಹದಲ್ಲಿ ಈ ಥರದ ತಿನಿಸುಗಳಿಂದ ದಿನೇದಿನೇ ವಿಷಸಂಗ್ರಹ ಆಗುವ ಅಪಾಯವಿರುವುದರಿಂದ, ಖಾದ್ಯಗಳ ಸಾಮೂಹಿಕ ಪರೀಕ್ಷೆ ಅನಿವಾರ್ಯವಾಗಿದೆ'' ಎಂದು ಅವರು ತಿಳಿಸಿದ್ದಾರೆ.

SCROLL FOR NEXT