ದೇಶ

ಅಂಗನವಾಡಿ ಆಗುತ್ತೆ ಹೈಟೆಕ್; ಸರ್ಕಾರ ಕೊಡುತ್ತೆ ಟ್ಯಾಬ್ಲೆಟ್!

Rashmi Kasaragodu

ನವದೆಹಲಿ: ಇನ್ನು ಮುಂದೆ ಅಂಗನವಾಡಿಗಳೂ ಆಗಲಿವೆ ಹೈಟೆಕ್. ಪ್ರತಿ ಅಂಗನವಾಡಿ ಸಿಬ್ಬಂದಿ ಕೈಯಲ್ಲಿ ಟ್ಯಾಬ್ಲೆಟ್ ಹರಿದಾಡಲಿದೆ. ಅಪೌಷ್ಟಿಕತೆ ಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಗಳನ್ನು ಎಷ್ಟು, ಯಾವ ಪ್ರಮಾಣದಲ್ಲಿ ನೀಡಲಾ ಗುತ್ತಿದೆ ಎಂಬುದು ಇದರಲ್ಲಿ ದಾಖಲಾಗಿದೆ. ಇಂಥದ್ದೊಂದು ಚಿಂತನೆಯಲ್ಲಿ ಈಗ ಕೇಂದ್ರ ಸರ್ಕಾರವಿದ್ದು, ಸದ್ಯದಲ್ಲೇ ಜಾರಿಗೆ ಬರುವ ಎಲ್ಲ ಸಾಧ್ಯತೆಗಳಿವೆ. ಇದಕ್ಕಾಗಿ ಅಂಗನವಾಡಿಗಾಗಿಯೇ  ಟ್ಯಾಬ್ಲೆಟ್‍ನಲ್ಲಿ ವಿಶೇಷ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಸಿಬ್ಬಂದಿಯು ಮಕ್ಕಳಿಗೆ ಪ್ರತಿದಿನ
ನೀಡುವ ಆಹಾರ, ಅವರ ಆರೋಗ್ಯ ಸ್ಥಿತಿಗತಿ ಕುರಿತು ವಿವರಗಳನ್ನು ದಾಖಲಿಸಬೇಕು. ಅಲ್ಲದೆ, ಆಹಾರಪೂರೈಕೆ ಮತ್ತು ಪೂರಕ ಪೌಷ್ಟಿಕ ಆಹಾರದ ಬಗ್ಗೆಯೂಇಲ್ಲಿ ನಮೂದಾಗಬೇಕು. ಈ ವರದಿಯನ್ನು ವಾಪಸ್ ಕಳುಹಿಸುವುದಲ್ಲ, ಅಂದಿನ ವರದಿಯನ್ನು ಅಂದೇ ದಾಖಲಿಸಿ ಕಳುಹಿಸಬೇಕು. ಈ ಕ್ರಮದಿಂದ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಯಾವ ಮಟ್ಟದಲ್ಲಿದೆ, ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಅರಿಯಲು ಸಹಾಯಕವಾಗುತ್ತದೆ. ಅಂಗನವಾಡಿಗಳಿಗೆ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿ ಆಹಾರ ಪೂರೈಕೆ ಮಾಡಲಿದೆ. ಈಗ ಐಸಿಡಿಎಸ್ ಯೋಜನೆಯಡಿ ಪೂರೈಕೆ ಮಾಡಲಾಗುತ್ತಿದ್ದ ಆಹಾರ, ಮಕ್ಕಳ ಆರೋಗ್ಯದ ವಿವರಗಳನ್ನು ಕಾಲಕಾಲಕ್ಕೆ ಪಡೆಯಲಾಗುತ್ತಿತ್ತು. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಕ್ಕಳಿಗೆಯಾವ ರೀತಿಯ ಪೌಷ್ಟಿಕ ಆಹಾರ ನೀಡಬೇಕೆಂಬ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿತ್ತು.

SCROLL FOR NEXT