ಮದರ್ ಡೈರಿ ಹಾಲು 
ದೇಶ

ಮದರ್ ಡೈರಿ ಹಾಲಿನಲ್ಲಿ ಡಿಟರ್ಜೆಂಟ್ ಪತ್ತೆ!

ಮದರ್ ಡೈರಿಯಲ್ಲಿ ಕೆಳದರ್ಜೆಯ ಹಾಲಿನ ಮಾದರಿಗಳು ಪತ್ತೆಯಾಗಿದ್ದು, ಈ ಪೈಕಿ ಒಂದರಲ್ಲಿ ಡಿಟರ್ಜೆಂಟ್ ಇದ್ದದ್ದು ಕಂಡುಬಂದಿದೆ

ಆಗ್ರಾ: ಮದರ್ ಡೈರಿಯಲ್ಲಿ ಕೆಳದರ್ಜೆಯ ಹಾಲಿನ ಮಾದರಿಗಳು ಪತ್ತೆಯಾಗಿದ್ದು, ಈ ಪೈಕಿ ಒಂದರಲ್ಲಿ ಡಿಟರ್ಜೆಂಟ್ ಇದ್ದದ್ದು ಕಂಡುಬಂದಿದೆ ಎಂದು ಆಹಾರ ತಪಾಸಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಈ ಆರೋಪವನ್ನು ಮದರ್ ಡೈರಿ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದು ಕಂಪನಿ ಕಟ್ಟುನಿಟ್ಟಿನ ಗುಣಮಟ್ಟದ ಪರೀಕ್ಷೆ ನಡೆಸುತ್ತದೆ, ಕೆಳ ದರ್ಜೆಯ ಹಾಲಿನ ಮಾದರಿಗಳು ಕಂಡುಬಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಮದರ್ ಡೈರಿಯಿಂದ ಎರಡು ಸ್ಯಾಂಪಲ್ ಗಳನ್ನು ಪಡೆಯಲಾಗಿತ್ತು, ಮಾದರಿಗಳನ್ನು ಲಖನೌ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು ಈ ವೇಳೆ ಮದರ್ ಡೈರಿಯಿಂದ ಪಡೆಯಲಾಗಿದ್ದ ಹಾಲು ಕೆಳದರ್ಜೆಯದ್ದಾಗಿದೆ ಎಂಬುದು ತಿಳಿದುಬಂದಿದೆ ಎಂದು  ಆಗ್ರಾದ ಆಹಾರ ಮತ್ತು ಔಷಧ ಆಡಳಿತದ ಮುಖ್ಯಸ್ಥ ರಾಮ್ ನರೇಶ್ ಯಾದವ್ ಹೇಳಿದ್ದಾರೆ. ಅಲ್ಲದೇ ಕೋಲ್ಕತ್ತಾ ಪ್ರಯೋಗಾಲಯದಲ್ಲಿ ನಡೆದ ತಪಾಸಣೆಯಲ್ಲಿ ಹಾಲಿನಲ್ಲಿ ಡಿಟರ್ಜೆಂಟ್ ಇದ್ದಿದ್ದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಆದರೆ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪವನ್ನು ತಳ್ಳಿಹಾಕಿರುವ ಮದರ್ ಡೈರಿ ಅಧಿಕಾರಿಗಳು, ಹಾಲನ್ನು ನಾಲ್ಕು ಹಂತದಲ್ಲಿ ಗುಣಮಟ್ಟದ ಪರೀಕ್ಷೆಗೊಳಪಡಿಸಲಾಗುತ್ತದೆ. ಆದ್ದರಿಂದ ಕೆಳದರ್ಜೆಯ ಹಾಲು ಕಂಡುಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಕಲಬೆರಕೆ ಕಂಡುಬಂದಲ್ಲಿ ತಕ್ಷಣವೇ ಅದನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

Winter Olympics 2026: ಮೂರೇ ದಿನದಲ್ಲಿ 10 ಸಾವಿರ ಕಾಂಡೋಮ್ ಗಳು ಖಾಲಿ, ಮತ್ತೆ 1 ಲಕ್ಷ ಸ್ಟಾಕ್ ಗೆ ಆರ್ಡರ್!

ಮುಸ್ಲಿಂರಿಗೆ ನೀಡಲಾಗಿದ್ದ ಶೇ.5 ರಷ್ಟು ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!

SCROLL FOR NEXT