ಸಂಜಯ್ ದತ್ 
ದೇಶ

ಮತ್ತೆ ಪೆರೋಲ್ ಗೆ ಸಂಜಯ್ ದತ್ ಅರ್ಜಿ

1993 ರ ಮುಂಬೈ ಬಾಂಬ್ ಸ್ಪೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಅಪರಾಧಿ ಸಂಜಯ್ ದತ್, ಮತ್ತೊಮ್ಮೆ ಪೆರೋಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈ : 1993 ರ ಮುಂಬೈ ಬಾಂಬ್ ಸ್ಪೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಅಪರಾಧಿ ಸಂಜಯ್ ದತ್, ಮತ್ತೊಮ್ಮೆ  ಪೆರೋಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮೇ.2013 ರಿಂದ ಪುಣೆ ಎರವಾಡ ಜೈಲಿನಲ್ಲಿ 42 ತಿಂಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಂಜಯ್ ದತ್, ಈಗಾಗಲೇ ಹಲವು ಬಾರಿ ಪೆರೋಲ್ ಪಡೆದಿದ್ದಾರೆ.

ಈ ಬಾರಿ 30 ದಿನಗಳ ಪೆರೋಲ್ ಗಾಗಿ ಸಂಜಯ್ ದತ್ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ಎರವಾಡ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.  1993 ರಲ್ಲಿ ಮುಂಬೈ ನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸಂಜಯ್ ದತ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.  

ಸಂಜಯ್ ದತ್, ಈಗಾಗಲೇ 18 ತಿಂಗಳ ಶಿಕ್ಷೆಯನ್ನು ಅನುಭವಿಸಿದ್ದು ಉಳಿದ ಅವಧಿಯ ಶಿಕ್ಷೆಯನ್ನು ಪೂರ್ಣಗೊಳಿಸಬೇಕಿದೆ. ಪೆರೋಲ್ ಅವಧಿಯಲ್ಲಿ ಎಷ್ಟು ದಿನ ರಜೆ ಹಾಕಲಾಗುವುದೋ ಅಷ್ಟು ದಿನಗಳ ಶಿಕ್ಷೆಯನ್ನು ನಂತರ ಅನುಭವಿಸ­ಬೇಕಾ­ಗುತ್ತದೆ. ಅಂದರೆ, ಒಟ್ಟಾರೆ ಶಿಕ್ಷೆಯ ಅವಧಿಯಲ್ಲಿ ಯಾವುದೇ ಕಡಿತವಿರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

'Digital arrest' ವಂಚನೆ ತಡೆಗೆ ಸಿಮ್ ಕಾರ್ಡ್ ವಿತರಣೆ ಬಿಗಿಗೊಳಿಸಲಿದೆ ಸರ್ಕಾರ; ಇನ್ಮುಂದೆ ಖರೀದಿಗೆ ನಿರ್ಬಂಧ, ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ!

ದೆಹಲಿಯಲ್ಲಿ ಸಿಎನ್‌ಜಿ ಸಿಲಿಂಡರ್ ಸ್ಫೋಟ: ಒಬ್ಬರ ಸಾವು, ಆರು ಮಂದಿಗೆ ಗಂಭೀರ ಗಾಯ!

ಹಗಲು ರಾತ್ರಿ ನೀರಿನಲ್ಲೇ ವಾಸ: ಇಕ್ಬಾಲ್ ನೆರವಿಗೆ ಅನಂತ್ ಅಂಬಾನಿ, ಮುಂಬೈಗೆ ಏರ್‌ಲಿಫ್ಟ್!