ದೇಶ

ಚಿಕನ್ ಬದಲು ಇಲಿ ಸರ್ವ್ ಮಾಡಿದ ಕೆ.ಎಫ್.ಸಿ?

Srinivas Rao BV

ವಾಷಿಂಗ್ ಟನ್ : ಇತ್ತೀಚಿನ ದಿನಗಳಲ್ಲಿ ಸಿದ್ಧ ಆಹಾರಗಳ ತಯಾರಿಕೆಯಲ್ಲಿ ತೀವ್ರ ನಿರ್ಲಕ್ಷ್ಯ ಕಂಡುಬರುತ್ತಿದೆ. ಮ್ಯಾಗಿಯಲ್ಲಿ ಸೀಸಾ, ಮದರ್ ಡೈರಿ ಹಾಲಿನಲ್ಲಿ ಡಿಟರ್ಜೆಂಟ್ ಕಾಂಪ್ಲಾನ್ ನಲ್ಲಿ ಹುಳ ಪತ್ತೆಯಾದಂತೆ, ಕೆ.ಎಫ್.ಸಿ, ಚಿಕನ್ ಎಂದು ಇಲಿಯನ್ನು  ಪೂರೈಸಿರುವ ಘಟನೆ ವರದಿಯಾಗಿದೆ.

ಯು.ಎಸ್ ನಲ್ಲಿ ಕೆಂಟುಕಿ ಫ್ರೈಡ್ ಚಿಕನ್  ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವ್ಯಕ್ತಿಯೊಬ್ಬ, ತನಗೆ ಚಿಕನ್ ಬದಲು ಬೇಯಿಸಿದ ಇಲಿಯನ್ನು ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕ್ಯಾಲಿಫೋರ್ನಿಯಾ ಔಟ್ ಲೆಟ್ ನಿಂದ ಖರೀದಿಸಿದ ಚಿಕನ್ ನಲ್ಲಿ ಒಂದು ವಿಲಕ್ಷಣವಾದ ಆಕಾರದ 'ಬಾಲ' ಕಂಡುಬಂದಿದೆ, ಪರಿಶೀಲನೆ ನಡೆಸಿದಾಗ ಅದು ಚಿಕನ್ ಅಲ್ಲ ಬದಲಿಗೆ ಇಲಿ ಎಂದು ತಿಳಿದುಬಂದಿದೆ.

ಇದರಿಂದಾಗಿ ತೀವ್ರ ಆಕ್ರೋಶಗೊಂಡುರುವ ಗ್ರಾಹಕ, ತನಗೆ ಸರ್ವ್ ಮಾಡಲಾಗಿದ್ದ ಇಲಿಯ ಫೋಟೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ತಾನು ಖರೀದಿಸಿದ್ದನ್ನು ವಾಪಸ್ ಔಟ್ ಲೆಟ್  ಗೆ ತೆಗೆದುಕೊಂಡು ಹೋದ ನಂತರ ಅಲ್ಲಿನ ಮ್ಯಾನೇಜರ್, ಕ್ಷಮೆ ಯಾಚಿಸಿದ್ದಾರೆ ಎಂದು ಗ್ರಾಹಕ ಡಿಕ್ಸನ್ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಕೆ.ಎಫ್.ಸಿ ತನಿಖೆಗೆ ಆಗ್ರಹಿಸಿದ್ದು, ಗ್ರಾಹಕನ ಆರೋಪವನ್ನು ತಳ್ಳಿಹಾಕಿದೆ.

SCROLL FOR NEXT