ದೇಶ

ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಬಂಧನ

ಕೋಲ್ಕತಾ: 72 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಬುಧವಾರ ಬಂಧಿಸಲಾಗಿದೆ.

ಬಂಧಿತ ಆರೋಪಿ ಬಾಂಗ್ಲಾದೇಶದ ನಜ್ರುಲ್ ಎಂದು ಗುರ್ತಿಸಲಾಗಿದ್ದು, ಘಟನೆ ನಡೆದ ನಂತರ ಆರೋಪಿ ಬಾಂಗ್ಲಾದೇಶದ ಗಡಿ ಭಾಗದಲ್ಲಿ ತಲೆಮರೆಸಿಕೊಂಡಿದ್ದು, ನಂತರ ಸ್ಥಳೀಯ ಪೊಲೀಸರು ಆತನನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಆರೋಪಿ ನಂತರ ಭಾರತದ ಒಳಗೆ ಬಂದು ಮತ್ತೆ ತಲೆಮರಿಸಿಕೊಂಡಿದ್ದ. ನಂತರ ವಿದೇಶಕ್ಕೆ ಹಾರಲು ಆರೋಪಿ ಯತ್ನಿಸುತ್ತಿರುವುದು ತನಿಖಾ ತಂಡದ ಗಮನಕ್ಕೆ ಬಂದಿತು. ಖಚಿತ ಮಾಹಿತಿ ಆಧಾರದ ಮೇಲೆ ಇಂದು ಕೋಲ್ಕತಾದ ಸೇಲ್ಡಹ್' ರೈಲು ನಿಲ್ದಾಣಕ್ಕೆ ತನಿಖಾ ತಂಡ ಭೇಟಿ ನೀಡಿದಾಗ ಆರೋಪಿ ಸಿಕ್ಕಿಹಾಕಿಕೊಂಡ, ಪ್ರಸ್ತುತ ಆರೋಪಿಯನ್ನು ಬಂಧಿನದಲ್ಲಿರಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಚಿತ್ತರಂಜನ್ ನಾಗ್ ಹೇಳಿದ್ದಾರೆ.

ಮಾರ್ಚ್ 14 ರಂದು ನಾಡಿಯಾ ಜಿಲ್ಲೆಯ ಗಂಗ್ನಾಪುರದಲ್ಲಿರುವ ಕಾನ್ವೆಂಟ್ ಗೆ ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಒಳ ನುಗ್ಗಿದ ರೌಡಿಗಳು ಹಣ ದೋಚಲು ಮುಂದಾಗಿದ್ದಾರೆ. ಈ ವೇಳೆ ರೌಡಿಗಳನ್ನು ಕಂಡ ಸನ್ಯಾಸಿನಿ ಹಣದೋಚಲು ಬಿಡದೆ ತಡೆವೊಡ್ಡಿದ್ದಾರೆ. ಸನ್ಯಾಸಿನಿಯ ವರ್ತನೆಯಿಂದ ತೀವ್ರ ಕೆಂಡಾಮಂಡಲವಾದ ರೌಡಿಗಳು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ನಂತರ ಸ್ಥಳದಲ್ಲಿ ಅಲ್ಮೆರಾದಲ್ಲಿದ್ದ ಹಣ ದೋಚಿ ಸ್ಥಳದಿಂದ ಪರಾರಿಯಾಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ಸಂಬಂಧ ಏ.1ರಂದು ಲೂಧಿಯಾನಾ ಪೊಲೀಸರು ನಾಲ್ವರು ಶಂಕಿತ ಬಾಂಗ್ಲಾದೇಶಿಗರನ್ನು ಬಂಧನಕ್ಕೊಳಪಡಿಸಿದ್ದರು.

SCROLL FOR NEXT