ದೇಶ

ಹೈದರಾಬಾದ್ ಕಾನೂನು ವಿವಿ ಪ್ರಮಾಣ ಪತ್ರದಲ್ಲಿ Mr, Ms ಜತೆ MXಗೂ ಜಾಗ!

ಹೈದರಾಬಾದ್: ಎನ್‍ಎಎಲ್‍ಎಸ್‍ಎಆರ್ ಕಾನೂನು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲ ಬಾರಿಗೆ ತನ್ನ ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ಲಿಂಗ ತಾಟಸ್ಥ್ಯ ನೀತಿ ಅನುಸರಿಸಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಅಥವಾ ನಿರ್ದಿಷ್ಟ ಲಿಂಗದ ಜತೆಗೆ ಗುರುತಿಸಿಕೊಳ್ಳಲು ಬಯಸದವರಿಗೆ ‘Mx’ ಎಂಬ ಹೊಸ ಪದವನ್ನು ಪರಿಚಯಿಸಿದೆ.

ಸಾಮಾನ್ಯವಾಗಿ ಪ್ರಮಾಣಪತ್ರ ನೀಡುವಾಗ ವ್ಯಕ್ತಿಯ ಹೆಸರಿನ ಮುಂದೆ ‘Mr’or  ‘Ms’ ಎಂದು ಸಂಬೋಧಿಸಲಾಗುತ್ತದೆ. ಆದರೆ, ಎನ್‍ಎಎಲ್‍ಎಸ್‍ಎಆರ್ ವಿವಿ ವಿದ್ಯಾರ್ಥಿಯೊಬ್ಬರಿಗೆ ನೀಡಿದ ಪ್ರಮಾಣ ಪತ್ರದಲ್ಲಿ ‘Mx’ ಎಂದು ಸಂಬೋಧಿಸಲಾಗಿದೆ. ಈ ರೀತಿಯ ಪ್ರಮಾಣಪತ್ರವನ್ನು ವಿದ್ಯಾರ್ಥಿಯೊಬ್ಬರ ಮನವಿಯಂತೆ ನೀಡಲಾಗಿದೆ. ಆದರೆ, ವಿವಿಯ ಈ ಕ್ರಮ ಹೊಸ ವಿವಾದ ಹುಟ್ಟುಹಾಕಿದೆ.

ಈ ರೀತಿಯ ಮಹತ್ವದ ಬದಲಾವಣೆಗಾಗಿ ವಿವಿಯು ಸಂಬಂಧಿಸಿದವರ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ರೀತಿಯ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ವಿವಿಯು ಆ ರೀತಿ ಮಾಡೇ ಇಲ್ಲ ಎಂದು ಹೇಳಲಾಗಿದೆ.

ಈ ಪ್ರಮಾಣಪತ್ರವನ್ನು ‘Mx’ ಅನಿಂದಿತಾ ಮುಖರ್ಜಿಗಾಗಿ ನೀಡಲಾಗಿದೆ. ಸಾಮಾನ್ಯವಾಗಿ ಪದವಿ ಪ್ರಮಾಣಪತ್ರಕ್ಕೆ ಹೈದರಾಬಾದ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳೇ ಸಹಿಹಾಕುತ್ತಾರೆ. ಯಾಕೆಂದರೆ ಈ ವಿವಿಯ ಕುಲಪತಿಗಳು ಅವರೇ ಆಗಿದ್ದಾರೆ. ವಿವಿ ಈ ನಿರ್ಧಾರ ಕೈಗೊಳ್ಳುವ ಮೊದಲು ಹೈಕೋರ್ಟ್ ನ್ಯಾಯಾಧೀಶರು ಮತ್ತು ವಿವಿಧ ವಿವಿಯ ಕುಲಪತಿ ಗಳನ್ನೊಳಗೊಂಡ ಅಕಾಡೆಮಿಕ್ ಕೌನ್ಸಿಲ್‍ನಲ್ಲಿ ಚರ್ಚಿಸಬೇಕಿತ್ತು ಎಂದು ಹೆಸರೇಳಲಿ ಚ್ಛಿಸದ ವಿವಿಯ ಉಪನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ.

ಲಿಂಗ ತಾಟಸ್ಥ್ಯ ನೀತಿ ಅನುಸರಿಸುವ ಮೊದಲು ಚರ್ಚೆಯಾಗಬೇಕಿತ್ತು. ಯಾಕೆಂದರೆ ಇದು ದೇಶದ ಮೊದಲ ಲಿಂಗ ತಾಟಸ್ಥ್ಯ ಪ್ರಮಾಣಪತ್ರ ಎಂದು ಉಪನ್ಯಾಸಕರೊಬ್ಬರು ಹೇಳಿದ್ದಾರೆ.

SCROLL FOR NEXT