ಚಾರ್ಲ್ಸ್ ಮಾರ್ಟಿನ್ (ತಮಿಳು ಪತ್ರಿಕೆಯೊಂದರಲ್ಲಿ ಪ್ರಕಟವಾದ ಚಿತ್ರ) 
ದೇಶ

ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಪುತ್ರ ಬಿಜೆಪಿಗೆ ಸೇರ್ಪಡೆ

ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಹಿರಿಯ ಪುತ್ರ ...

ನವದೆಹಲಿ: ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಹಿರಿಯ ಪುತ್ರ ಚಾರ್ಲ್ಸ್ ಜೋಸ್ ಮಾರ್ಟಿನ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಬಯಲಾಗಿದೆ.

ಮಾಧ್ಯಮದ ವರದಿ ಪ್ರಕಾರ, ಲಾಟರಿ ಕಿಂಗ್ ಹಗರಣದ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಪುತ್ರ ಚಾರ್ಲ್ಸ್ ಮಾರ್ಟಿನ್ ಚೆನ್ನೈನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಚಾರ್ಲ್ಸ್ ಸೇರ್ಪಡೆಯನ್ನು ಬಿಜೆಪಿ  ಸಮರ್ಥಿಸಿಕೊಂಡಿದೆ. ಬಿಜೆಪಿ ಸೇರ್ಪಡೆಗಾಗಿ ಚಾರ್ಲ್ಸ್ ಮೂರು ತಿಂಗಳ ಹಿಂದೆ ಪಕ್ಷದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಏತನ್ಮಧ್ಯೆ, ಚೆನ್ನೈ ಬಿಜೆಪಿ ಘಟಕ ತಂದೆಯ(ಸ್ಯಾಂಟಿಯಾಗೋ ಮಾರ್ಟಿನ್) ಬಗ್ಗೆ ಗೊತ್ತಿಲ್ಲ, ಆದರೆ ಮಗನ ಮೇಲೆ ಯಾವುದೇ ಕೇಸಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.

ರಾಜ್ಯದಲ್ಲಿ ಬಹುಕೋಟಿ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಬಿಜೆಪಿ, ಜೆಡಿಎಸ್ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಬಹುಕೋಟಿ ಲಾಟರಿ ಹಗರಣದ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಹೆಂಡತಿ ಲೀಮಾ ರೋಸ್ ಲೋಕಸಭಾ ಚುನಾವಣೆಗೂ ಮುನ್ನಾ ನರೇಂದ್ರ ಮೋದಿ ಜೊತೆ ಕೊಯಂಬತ್ತೂರಿನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಸ್ಯಾಂಟಿಯಾಗೋ ಮಾರ್ಟಿನ್ ಕೇರಳದಲ್ಲಿ ನಡೆಸಿದ ಲಾಟರಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, 32 ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಸಿಬಿಐ ಈಗಾಗಲೇ ಆರೋಪಪಟ್ಟಿಯನ್ನು ಕೂಡಾ ದಾಖಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!