ಅನಂತ್‌ ಸಿಂಗ್‌ 
ದೇಶ

ಬಿಹಾರದ ಜೆಡಿಯು ಶಾಸಕ ಅನಂತ್‌ ಸಿಂಗ್‌ ವಿರುದ್ಧ ವಿಚಾರಣೆ

ನಾಲ್ಕು ಮಂದಿಯ ಅಪಹರಣ ಹಾಗೂ ಆ ಪೈಕಿ ಒಬ್ಟಾತನ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷದ...

ಪಾಟ್ನಾ: ನಾಲ್ಕು ಮಂದಿಯ ಅಪಹರಣ ಹಾಗೂ ಆ ಪೈಕಿ ಒಬ್ಟಾತನ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷದ ಶಾಸಕ ಅನಂತ್‌ ಸಿಂಗ್‌ ಅವರ ಹೆಸರು ಕೇಳಿ ಬಂದಿದೆ. ಆದರೆ ಈ ಪ್ರಕರಣದಲ್ಲಿ ಶಾಸಕರ ಪಾತ್ರದ ಕುರಿತಾಗಿ ತನಿಖೆ ನಡೆಸಲಾಗುವುದೆಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪೊಲೀಸರಿಗೆ ಹೇಳಿದ್ದಾರೆ.

ಮೋತಿಹಾರಿಯ ಎಸ್‌ ಎಸ್‌ ಪಿಯಾಗಿ ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳಲು ನಿರ್ಗಮಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಪಾಟ್ನಾದ ಹಿರಿಯ ಪೊಲೀಸ್‌ ಸುಪರಿಂಟೆಂಡೆಂಟ್‌ ಜೀತೇಂದ್ರ ರಾಣಾ ತಿಳಿಸಿದರು.

ಅನಂತ್‌ ಸಿಂಗ್‌ ಹೆಸರು ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಕೇಳಿ ಬರಲು ತೊಡಗಿದ ಹಿನ್ನೆಲೆಯಲ್ಲೇ ರಾಣಾ ಅವರನ್ನು ಮೋತಿಹಾರಿಗೆ ವರ್ಗಾಯಿಸಲಾಗಿದ್ದು ಇದೀಗ ಪಾಟ್ನಾದಲ್ಲಿನ ಅವರ ಸ್ಥಾನಕ್ಕೆ ವಿಕಾಶ್‌ ವೈಭವ್‌ ಅವರನ್ನು ನೇಮಿಸಲಾಗಿದೆ.

ನಾಲ್ವರ ಅಪಹರಣ ಹಾಗೂ ಆ ಪೈಕಿ ಒಬ್ಬರಾದ ಪವನ್‌ ಯಾದವ್‌ ಎಂಬವರ ಕೊಲೆಗೆ ಸಂಬಂಧಿಸಿ ಜೂನ್‌ 17ರಂದು ಪಾಟ್ನಾ ಜಿಲ್ಲೆಯ ಬಾರ್ಹಾ ಎಂಬಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಇವರನ್ನು ವಿಚಾರಣೆಗೊಳಪಡಿಸಿದಾಗ ಅವರು ಮೋಕಮಾಹ್‌ ಶಾಸಕ ಅನಂತ್‌ ಸಿಂಗ್‌ ಅವರು ಪ್ರಕರಣದಲ್ಲಿ ಶಾಮೀಲಾಗಿರುವುದನ್ನು ಹೇಳಿದ್ದಾರೆ ಎಂದು ರಾಣಾ ತಿಳಿಸಿದ್ದಾರೆ.

ಜೆಡಿಯುವಿನ ಬಾಹುಬಲಿ ಎಂದೇ ಖ್ಯಾತರಾಗಿರುವ ಅನಂತ್ ಸಿಂಗ್‌ ಈ ಆರೋಪ ನಿರಾಕರಿಸಿದ್ದು ತಾನು ಯಾವುದೇ ಅಪಹರಣ - ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಈ ಆರೋಪಗಳ ಮೂಲಕ ರಾಜಕೀಯ ಷಡ್ಯಂತ್ರದಲ್ಲಿ ತನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅನಂತ್ ಸಿಂಗ್ ಬಂಧಿಸಿ  ಕೊಲೆ ಅಪಹರಣ ಆರೋಪ ಎದುರಿಸುತ್ತಿರುವ ಶಾಸಕ ಅನಂತ್ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕೆಂದು ಆರ್ ಜೆಡಿ ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

ಭಾರತದಲ್ಲಿ ಇನ್ನೂ ಎರಡು ತಿಂಗಳಿಗೆ ಆಗುವಷ್ಟು ಕಚ್ಚಾ ತೈಲ ಇದೆ, ಆದರೆ...: ಬೆಲೆ ಏರಿಕೆಗೆ ಕೇಂದ್ರ ಪೀಠಿಕೆ?

ಕೊನೆಗೂ ಪುಟಿದೆದ್ದ ಷೇರುಮಾರುಕಟ್ಟೆ: Sensex 1,186 ಅಂಕ ಏರಿಕೆ, 10 ಲಕ್ಷ ಕೋಟಿ ರೂ ಲಾಭ, ಚೇತರಿಕೆಗೆ ಇದೇನಾ ಕಾರಣ?

ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಕೊರತೆ; ಕಿಲೋಮೀಟರ್‌ಗಟ್ಟಲೇ ಕ್ಯೂ: ಸಚಿವ ಮುನಿಯಪ್ಪ ಹೇಳಿದ್ದೇನು?

35 ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತೇವೆ, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಕ್ರಮ ಕೈಗೊಳ್ಳುತ್ತೇವೆ: ಟ್ರಂಪ್ ಗೆ ಯುಕೆ ಪ್ರಧಾನಿ ಸೆಡ್ಡು!

SCROLL FOR NEXT