ದೇಶ

ಲಲಿತ್ ಮೋದಿ ಭೇಟಿ ಮಾಡಿದ ಮರಿಯಾಗೆ ಶಿವಸೇನಾ ಬೆಂಬಲ

Lingaraj Badiger

ಮುಂಬೈ: ತನ್ನ ಮಿತ್ರ ಪಕ್ಷ ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸಿರುವ ಶಿವಸೇನೆ, ಐಪಿಎಲ್ ಹಗರದ ಆರೋಪಿ ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಬೆಂಬಲಿಸುವ ಮೋದಿ ಸರ್ಕಾರ, ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರನ್ನು ಏಕೆ ಬೆಂಬಲಿಸುತ್ತಿಲ್ಲ ಎಂದು ಪ್ರಶ್ನಿಸಿದೆ.

'ಅಧಿಕಾರಿಗಳ ಅನುಮತಿಯೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿರುವ ಲಲಿತ್ ಮೋದಿ ಐಪಿಎಲ್ ಹಗರಣದ ಆರೋಪಿಯಾಗಿದ್ದರೂ ಮುಂಬೈ ಪೊಲೀಸ್ ಆಯುಕ್ತರು ಆತನ ಕೈಗೆ ಕೊಳ ತೊಡಿಸಿ ದೆಹಲಿ ಆಗಲಿ ಮುಂಬೈಗೆ ಆಗಲಿ ಕರೆತರುವ ಅಧಿಕಾರ ಇಲ್ಲ' ಎಂದು ಶಿವಸೇನೆ ಹೇಳಿದೆ.

'ಲಲಿತ್ ಮೋದಿ ಐಪಿಎಲ್ ಕಿಂಗ್ ಆಗುವ ಮೂಲಕ ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಹಾಗಂತ ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವೆ?' ಎಂದು ಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ಮಿಸಿದೆ.

2014 ರಲ್ಲಿ ಐಪಿಎಲ್ ಹಗರಣ ಪ್ರಮುಖ ಆರೋಪಿ ಲಲಿತ್ ಮೋದಿ ಅವರನ್ನು ಉನ್ನತಾಧಿಕಾರಿ ರಾಕೇಶ್ ಮರಿಯಾ ಅವರು ಭೇಟಿ ಮಾಡಿದ್ದರು. ಈ ಭೇಟಿಯ ದೃಶ್ಯಾವಳಿಗಳು ಕೆಲವು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು. ಹೀಗಾಗಿ ಪೊಲೀಸ್ ಅಧಿಕಾರಿ ರಾಕೇಶ್ ಮರಿಯಾ ಅವರು ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರನ್ನು ಯಾವ ಕಾರಣಕ್ಕೆ ಭೇಟಿಯಾಗಿದ್ದರು, ಲಲಿತ್ ಮೋದಿ ಅವರಿಗೂ ರಾಕೇಶ್ ಮರಿಯಾ ಯಾವ ಸಂಬಂಧವಿದೆ ಎಂಬ ಕುರಿತಂತೆ ಪ್ರಶ್ನೆಗಳು ಉದ್ಭವಿಸಿದ್ದವಲ್ಲದೆ, ಹಲವು ಚರ್ಚೆಗಳಿಗೆ ಕಾರಣವಾಗಿತ್ತು.

SCROLL FOR NEXT