ತಿರುವನಂತಪುರಂ: ವಿಶ್ವದ ಮಾಜಿ ನಂಬರ್ ಒನ್ ಟೆನಿಸ್ ತಾರೆ ಸ್ಟೆಫಿ ಗ್ರಾಫ್ ಅವರನ್ನು ಕೇರಳದ ಆಯುರ್ವೇದ ಪ್ರವಾಸೋದ್ಯಮದ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಆಯುರ್ವೇದ ಪ್ರವಾಸೋದ್ಯಮದಲ್ಲಿನ ವಿವಿಧ ಇಲಾಖೆಗಳ ಸೂಚನೆ ಮೇರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಕ್ರೀಡಾಪಟುವನ್ನು ರಾಯಭಾರಿಯನ್ನಾಗಿ ಮಾಡಲು ಕೇರಳ ಸರ್ಕಾರ ತೀರ್ಮಾನ ಕೈಗೊಂಡಿತ್ತು.
ಬುಧವಾರ ಕೇರಳ ಸಚಿವ ಸಂಪುಟ ಸಭೆ ನಡೆಸಿ ಪ್ರವಾಸೋದ್ಯಮದ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದೆ. ಈ ಹಿಂದೆಯೇ ಆಯುರ್ವೇದ ಪ್ರವಾಸೋದ್ಯಮದ ರಾಯಭಾರಿಯಾಗಲು 46ರ ಹರೆಯದ ಸ್ಟೆಫಿ ಗ್ರಾಫ್ ಸಮ್ಮತಿ ಸೂಚಿಸಿದ್ದರು.