ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜು.21ರಂದು ಆರಂಭವಾಗಲಿದ್ದು, ಆ. 13ರವರೆಗೆ ನಡೆಯಲಿದೆ. ಸಂಸದೀಯ ವ್ಯವಹಾರಗಳಿಗೆ ಸಂಬಂ„ಸಿದ ಸಚಿವ ಸಂಪುಟ ಸಮಿತಿಯಲ್ಲಿ
ಬುಧವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಲಿತ್ ಮೋದಿ ಪ್ರಕರಣದಲ್ಲಿ ಸಚಿವೆ ಸುಷ್ಮಾ, ಸ್ಮೃತಿ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೆಸರು ಕೇಳಿಬಂದಿರುವ
ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿಪಕ್ಷಗಳ ವಾಗ್ದಾಳಿಗೆ ಗುರಿಯಾಗುವ ನಿರೀಕ್ಷೆ ಇದೆ.
ಸುಷ್ಮಾ ಮತ್ತು ರಾಜೇ ರಾಜಿನಾಮೆ ನೀಡದ ಹೊರತು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
ದೇಶದ ಆರು ಕಡೆ ಐಐಎಂ: ಇದರ ಜತೆಗೆ ದೇಶದ ಆರು ಕಡೆ ಹೊಸ ಐಐಎಂಗಳನ್ನು ಆರಂಬಿsಸುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ. ಆಂಧ್ರದ ವಿಶಾಖಪಟ್ಟಣ, ಬಿಹಾರದ ಬೋಧ್ ಗಯಾ, ಹಿಮಾಚಲ ಪ್ರದೇಶದ ಸಿರ್ಮಾವುರ್, ಮಹಾರಾಷ್ಟ್ರದ ನಾಗ್ಪುರ, ಒಡಿಶಾದ ಸಂಬಾಲ್ಪುರ್ ಹಾಗೂ ಪಂಜಾಬ್‍ನ ಅಮೃತ್‍ಸರ್‍ನಲ್ಲಿ ಹೊಸದಾಗಿ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ತಲೆಎತ್ತಲಿದೆ.
ಸ್ಮಾರಕಕ್ಕೆ ಒಪ್ಪಿಗೆ: ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ ಅವರ ಹುಟ್ಟೂರಾದ ಬಿಹಾರದ ಲಾಲಾ ಕತೋಲಾದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸ್ಮಾರಕದಲ್ಲಿ ವರ್ಚುವಲ್ ಮ್ಯೂಸಿಯಂ, ಪ್ರಜಾಪ್ರಭುತ್ವ, ಪಂಚಾಯತ್ ಹಾಗೂ ಗಾಂಧಿ ತತ್ವಗಳ ಕುರಿತು ಅಧ್ಯಯನ ನಡೆಸಲು¸ ಸಂಸ್ಥೆಯೊಂದು ತಲೆಎತ್ತಲಿದೆ. ಇದರ ಜತೆಗೆ ಪೂರ್ವ ಹಾಗೂ ಪಶ್ಚಿಮ ಸರಕು ಸಾಗಣೆ ಕಾರಿಡಾರ್(ಡಿಎಫ್ ಸಿ) ಯೋಜನೆಗೆ ಸಂಬಂಧಿಸಿ
ಸಲ್ಲಿಸಲಾದ ರು. 81,459 ಕೋಟಿ ವೆಚ್ಚದ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಒಪ್ಪಿಗೆಯನ್ನು ಸಂಪುಟ ನೀಡಿದೆ.