ನವದೆಹಲಿ: 1965ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತ ಜಯಗಳಿಸಿ ಆಗಸ್ಟ್ ಗೆ 50 ವರ್ಷಗಳು ಪೂರ್ತಿಗೊಳ್ಳಲಿವೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ಗಣರಾಜ್ಯ ದಿನದ ಮಾದರಿಯಲ್ಲೇ ರು.35 ಕೋಟಿ ವೆಚ್ಚದಲ್ಲಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ. ಯುದ್ಧದಲ್ಲಿ ಪಾಲ್ಗೊಂಡ ಯೋಧರನ್ನು ಅಂದು ಗೌರವಿಸಲಾಗುತ್ತದೆ. ಆ.28ರಿಂದ ಕಾರ್ಯಕ್ರಮ ಆರಂಭವಾಗಲಿವೆ.
ಸೆ.20ರಂದು ರಾಜ್‍ಪಥ್‍ನಲ್ಲಿ ಅದ್ಧೂರಿ ಪರೇಡ್ ನಡೆಯಲಿದೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೂ ಮರಣೋತ್ತರ ಗೌರವ ನೀಡಲು ಸರ್ಕಾರ ಉದ್ದೇಶಿಸಿದೆ. ರಾಷ್ಟ್ರಪತಿ ಮುಖರ್ಜಿ, ಪ್ರಧಾನಿ ಮೋದಿ, ರಕ್ಷಣಾ ಸಚಿ ಮನೋಹರ್ ಪರ್ರಿಕರ್ ಭಾಗವಹಿಸಲಿದ್ದಾರೆ.