ಇಂಫಾಲ: ಇಂಫಾಲದ ರಾಜಭವನದ ಬಳಿ ಸುಧಾರಿತ ಸ್ಪೋಟಕ ಸಾಧನವೊಂದು ಸ್ಫೋಟಗೊಂಡಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಷ್ಟ ಪಡಿಸಿದ್ದಾರೆ.
ಬೆಳಗ್ಗಿನ ಜಾವ ಸುಮಾರು 5.30 ರ ವೇಳೆಗೆ ರಾಜ ಭವನದ ಕಂಪೌಂಡ್ ಗೆ ಅತಿ ಸಮೀಪದಲ್ಲೇ ಸ್ಪೋಟ ಸಂಭವಿಸಿದೆ. ಮಣಿಪುರ ವಿಧಾನಸಭೆ ಅಧಿವೇಶನ ಆರಂಭವಾಗುವುದಕ್ಕೆ ಕೆಲವು ಗಂಟೆಗಳ ಮೊದಲು ಸ್ಪೋಟ ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸ್ಪೋಟ ಸಂಭವಿಸಿದ ನಂತರ ಪರಿಸ್ಥಿತಿ ಸಹಜವಾಗಿಯೇ ಇದ್ದು ಎಂದಿನಂತೆ ವಿಧಾನ ಸಭೆ ಅಧಿವೇಶನ ನಡೆಯಿತು. ಇನ್ನೂ ಇದುವರೆಗೂ ಯಾವುದೇ ಸಂಘಟನೆಗಳು ಘಟನೆಯ ಹೊಣೆ ಹೊತ್ತಿಲ್ಲ.