ದೇಶ

ಕಾನ್ಪುರ ಬಾಲಕನ ಕ್ಯಾಮರಾದಲ್ಲಿ ಹಾರುವ ತಟ್ಟೆ ಸೆರೆ!

Srinivas Rao BV

ಲಖನೌ: ಅಮೆರಿಕಾದ ಹಲವು ಪ್ರದೇಶಗಳಲ್ಲಿ ಹಾರುವ ತಟ್ಟೆಗಳು ಗೋಚರಿಸಿದ್ದನ್ನು ಕೇಳಿದ್ದೇವೆ, ಈಗ ಭಾರತದಲ್ಲೂ ಸಹ ಹಾರುವ ತಟ್ಟೆ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.

ಉತ್ತರ ಪ್ರದೇಶದ ಖಾನ್ ಪುರದಲ್ಲಿ ಬಾಲಕನೊಬ್ಬನ ಕಣ್ಣಿಗೆ ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ. ಮೊಬೈಲ್ ನಲ್ಲಿ ಮೋಡಗಳ ಚಿತ್ರ ಸೆರೆ ಹಿಡಿಯುತ್ತಿರಬೇಕಾದರೆ. ವೃತ್ತಾಕಾರದ ವಸ್ತುವೊಂದು ಹಾರಾಡುತ್ತಿರುವುದು ಕಂಡಿದೆ. ಕೂಡಲೇ ಈ ವಿಷಯವನ್ನು ಪೋಷಕರಿಗೆ ತಿಳಿಸಿದ ಬಾಲಕ ಅಭಿಜಿತ್, ಮೊಬೈಲ್ ನಲ್ಲಿ ಸೆರೆಯಾಗಿದ್ದ ದೃಶ್ಯವನ್ನು ತೋರಿಸಿದ್ದಾನೆ. ಇದನ್ನು ನೋಡಿದ ಪರಿಶೀಲನೆ ನಡೆಸಿದ ಪೋಷಕರು ಆಶ್ಚರ್ಯ ಪಟ್ಟಿದ್ದಾರೆ.  

ಹಾರಾಡುತ್ತಿದ್ದ ವೃತ್ತಾಕಾರದ ವಸ್ತುವಿನಿಂದ ಕೆಲವೊಮ್ಮೆ ಕೆಂಪು ಬಣ್ಣದ ಬೆಳಕು ಮಿನುಗುತ್ತಿತ್ತು ಎಂದು ಅಭಿಜಿತ್ ತಿಳಿಸಿದ್ದಾನೆ. ಭಾರತದ ಮಟ್ಟಿಗೆ ಇದು ಅಚ್ಚರಿಯ ಸಂಗತಿಯಾಗಿದ್ದು, ಈ ಫೋಟೋಗಳ ಬಗ್ಗೆ ಸತ್ಯತೆಯನ್ನು ತಿಳಿಯಲು ಪ್ರಯೋಗಾಲಯದಲ್ಲಿ ಪರಿಶೀಲಿಸಲು ಸಿದ್ಧವಿರುವುದಾಗಿ ಅಭಿಜಿತ್ ನ ತಂದೆ ತಿಳಿಸಿದ್ದಾರೆ.

ಅಮೆರಿಕಾದಲ್ಲಿ ಹಾರುವ ತಟ್ಟೆಗಳು ಹೆಚ್ಚು ಕಾಣಿಸಿಕೊಂಡಿರುವ ಉದಾಹರಣೆಗಳಿವೆ, ಯುಎಫ್ಒ ಗಳಿಗಾಗಿಯೇ ಅಮೆರಿಕಾದಲ್ಲಿ ರಾಷ್ಟ್ರೀಯ ವರದಿ ಕೇಂದ್ರ ಇದ್ದು, ಯುಎಫ್ಒ ಕಾಣಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ 2015 ರ ಜೂನ್ ನಲ್ಲಿಯೇ 338 ವರದಿಗಳು ಬಂದಿವೆ.

SCROLL FOR NEXT