ದೇಶ

ಭಾರತದ ರಾಯಭಾರಿ ರವಿ ಥಾಪರ್ ನ್ಯೂಜಿಲೆಂಡ್ ನಿಂದ ವಾಪಸ್

ಮೆಲ್ಬರ್ನ್: ನ್ಯೂಜಿಲೆಂಡ್ ನಲ್ಲಿನ ಭಾರತದ ರಾಯಭಾರಿ ರವಿ ಥಾಪರ್ ಅವರನ್ನು ಶನಿವಾರ ಭಾರತಕ್ಕೆ ವಾಪಸ್ ಕರೆಸಲಾಗಿದೆ.

ಭಾರತೀಯ ರಾಯಭಾರಿ ರವಿ ಥಾಪರ್ ಅವರ ಪತ್ನಿ ಶರ್ಮಿಳಾ ಅವರು ಈ ಹಿಂದೆ ಮನೆ ಕೆಲಸದಾತನ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು. ಅಲ್ಲದೆ, ಈ ಪ್ರಕರಣ ಹಲವು ವಿವಾದಗಳಿಗೆ ಕಾರಣವಾಗಿತ್ತು.

ಶರ್ಮಿಳಾ ಥಾಪರ್ ಅವರು ಅವರ ಮನೆ ಕೆಲಸದಾತ ಒಂದು ದಿನ ರಾತ್ರಿ ಮನೆಯಿಂದ ಹೊರಬಂದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ಆತನ ಪರಿಸ್ಥಿತಿ ಕಂಡ ಪೊಲೀಸರು ನಂತರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತಾನೊಬ್ಬ ಮನೆಗೆಲಸ ಮಾಡುವವನಾಗಿದ್ದು, ಥಾಪರ್ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದೆ. ಶರ್ಮಿಳಾ ಅವರು ಪ್ರತಿ ದಿನ ಚಿತ್ರ ಹಿಂಸೆ ನೀಡುತ್ತಿದ್ದು, ಜೈಲಿನಲ್ಲಿರುವ ಖೈದಿಯಂತೆ ನನ್ನನ್ನು ನಡೆಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದ.

ಹಲ್ಲೆಗೊಳಗಾದ ವ್ಯಕ್ತಿ ಥಾಪರ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಮೇ ತಿಂಗಳಿನಲ್ಲೇ ಆತ ಭಾರತಕ್ಕೆ ಹಿಂದಿರುಗಿದ್ದ, ಇದೀಗ ರವಿ ಥಾಪರ್ ಅವರು ಭಾರತಕ್ಕೆ ಮರಳಲಿದ್ದಾರೆ ಎಂದು ನ್ಯೂಜಿಲೆಂಡ್ ನ ವಿದೇಶಾಂಗ ಸಚಿವಾಲಯ ಹೇಳಿದೆ. ಇಂದು ಬಳಿಗ್ಗೆ ವೆಲ್ಲಿಂಗ್ಟನ್ ನಲ್ಲಿರುವ ಅವರ ಮನೆಯ ಮುಂದೆ ವಾಹವೊಂದು ನಿಂತಿತ್ತು. ಮಾಧ್ಯಮವೊಂದು ರವಿ ಥಾಪರ್ ಮತ್ತು ಅವರ ಪತ್ನಿ ಅವರನ್ನು ಸಂದರ್ಶನ ನಡೆಸಲು ಮುಂದಾದಾಗ ಅಲ್ಲಿನ ಭದ್ರತಾ ಪೊಲೀಸರು ನಿರಾಕರಿಸಿದ್ದರು ಎಂದು ಎನ್ ಜಡ್ ರೇಡಿಯೋ ತನ್ನ ವೆಬ್ ತಾಣದಲ್ಲಿ ವರದಿ ಮಾಡಿದೆ.

SCROLL FOR NEXT