ದೇಶ

ಬುಲೆಟ್ ಟ್ರೈನ್ ಗೆ ನೀವೂ ಹೆಸರು ಸೂಚಿಸಬಹುದು!

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ, ಹೈ-ಸ್ಪೀಡ್ ಬುಲೆಟ್ ಟ್ರೈನ್ ಗೆ ನೀವು ಹೆಸರು ಸೂಚಿಸಬಹುದು!

ನವದೆಹಲಿ: ಬುಲೆಟ್ ಟ್ರೈನ್ ಗೆ ಸಂಬಂಧಿಸಿದಂತೆ ನಿಮ್ಮ ಹೆಸರು ರಾರಾಜಿಸುವಂತೆ ಮಾಡಬೇಕಾ? ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ, ಹೈ-ಸ್ಪೀಡ್ ಬುಲೆಟ್ ಟ್ರೈನ್ ಗೆ ಹೆಸರು ಕೊಡಿ!

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಹೈ-ಸ್ಪೀಡ್ ಬುಲೆಟ್ ಟ್ರೈನ್ ಯೋಜನೆ ಮೊದಲ ಹಂತದಲ್ಲಿದ್ದರೂ, ರೈಲ್ವೇ ಇಲಾಖೆ ಮಾತ್ರ ಬುಲೆಟ್ ಟ್ರೈನ್ ಗೆ ಭಾರತೀಯ ಹೆಸರನ್ನೇ ನೀಡುವುದಕ್ಕೆ ತಯಾರಿ ನಡೆಸಿದೆ. ಬುಲೆಟ್ ಟ್ರೈನ್ ಗೆ ದೇಸಿ ಹೆಸರು ನೀಡಲು ಈ ಹಿಂದೆ ಇಲಾಖೆಯ ನೌಕರರಿಗೆ ಸಚಿವ ಸುರೇಶ್ ಪ್ರಭು ಸೂಚನೆ ನೀಡಿದ್ದರು ಈ ಯೋನನೆಯನ್ನು ವಿಸ್ತರಿಸಿರುವ ರೈಲ್ವೆ ಸಚಿವರು, ಜನಸಾಮಾನ್ಯರು ಸಹ ಬುಲೆಟ್ ಟ್ರೈನ್ ಗೆ ಹೆಸರು ಸೂಚಿಸಬಹುದೆಂದು ಆದೇಶಿಸಿದ್ದಾರೆ.

ರೈಲ್ವೆ ಇಲಾಖೆಯ ಸಿಬ್ಬಂದಿಗಳ ಪೈಕಿ ಅತಿ ಹೆಚ್ಚು ಜನರು ಪುರಾಣಿಕ ಕಥೆಗಳಲ್ಲಿ ಬರುವ ವಿಮಾನದ ಹೆಸರಾಗಿದ್ದ ಪುಷ್ಪಕ್ ಎಂಬ ಹೆಸರನ್ನು ಸೂಚ್ಚಿ ದ್ದಾರೆ. ಇದರೊಂದಿಗೆ ತೇಜಸ್ ಎಂಬ ಹೆಸರನ್ನೂ ಸೂಚಿಸಲಾಗಿದೆ. ಅಧಿಕಾರಿಗಳು ಸೂಚಿಸುತ್ತಿರುವ ಹೆಸರು ರೈಲ್ವೇ ಸಚಿವರಿಗೆ ಒಪ್ಪಿಗೆಯಾಗದ ಹಿನ್ನೆಲೆಯಲ್ಲಿ ಬುಲೆಟ್ ಟ್ರೈನ್ ಗೆ ನಾಮಕರಣ ಮಾಡುವ ಪ್ರಕ್ರಿಯೆಯಲ್ಲಿ  ಜನಸಾಮಾನ್ಯರು ಭಾಗವಹಿಸಬೇಕು ಎಂದು ಹೇಳಿದ್ದಾರೆ. ಶೀಘ್ರದಲ್ಲೆ  ಟ್ವಿಟರ್ ಫೇಸ್ ಬುಕ್ ನಲ್ಲಿ ಮನವಿ ಮಾಡಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಲೆಟ್ ಟ್ರೈನ್ ಗಾಗಿ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಹೆಸರುಗಳಲ್ಲಿ ಅತ್ಯುತ್ತಮವಾದದ್ದನ್ನು ಅಂಗೀಕರಿಸುತ್ತೇವೆ. ಇದಕ್ಕಾಗಿ ಸ್ವತಃ ಸಚಿವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ