ನವದೆಹಲಿ/ಅಹಮದಾಬಾದ್: ಗುಜರಾತ್ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಗುಜರಾತ್‍ನ ಗುಜರಾತ್ ಮತ್ತು ಸೌರಾಷ್ಟ್ರದ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಐದು ಸಿಂಹಗಳು ಬಲಿಯಾಗಿವೆ.
ಅಮ್ರೇಲಿ ಮತ್ತು ಭವನಗರ ಜಿಲ್ಲೆಗಳ ಕಾಡುಗಳಲ್ಲಿ ಒಟ್ಟು ಐದು ಸಿಂಹಗಳ ಶವ ಪತ್ತೆಯಾಗಿದ್ದು ಅವುಗಳಲ್ಲೊಂದು ಮೂರು ತಿಂಗಳ ಸಿಂಹದ ಮರಿಯೂ ಸೇರಿದೆ. ಸಿಂಹಗಳಲ್ಲದೆ, ಕಾಡುಕೋಣ, ಮುಳ್ಳುಹಂದಿ, ಜಿಂಕೆಗಳು ಕೂಡ ಮೃತವಾಗಿರುವುದು ಪತ್ತೆಯಾಗಿದೆ.
ಇನ್ನೂ ಸಾವುಗಳಾಗದಂತೆ ತಡೆಯಲು ಅರಣ್ಯ ಇಲಾಖೆಯ 35 ಸಿಬ್ಬಂದಿಗಳ ಏಳುತಂಡ ಈಗಾಗಲೇ ಕಾಡುಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಅಮ್ರೇಲಿಯಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ 90 ವರ್ಷಗಳಲ್ಲೇ ಭೀಕರವಾದದ್ದು ಎಂದು ಗುಜರಾತ್ ಸರ್ಕಾರ ತಿಳಿಸಿದೆ. ನೆರೆ ಪರಿಸ್ಥಿತಿಯಿಂದಾಗಿ ಗುಜರಾತ್‍ನಲ್ಲಿ 70 ಮಂದಿ ಅಸುನೀಗಿದ್ದಾರೆ.