ದೇಶ

ವಿಐಪಿ ಸಂಸ್ಕೃತಿ ನನಗಿಷ್ಟವಿಲ್ಲ: ದೇವೇಂದ್ರ ಫಡ್ನವೀಸ್

ಮುಂಬೈ: ತುರ್ತುಪರಿಸ್ಥಿತಿ ಅಥವಾ ಜೀವಪಯಾದ ಯಾವುದೇ ಸಂದರ್ಭಗಳಿಲ್ಲದ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ತಡೆದು, ಸಾರ್ವಜನಿಕರಿಗೆ ತೊಂದರೆ ನೀಡಿ, ಕೊಡುವಂತಹ ವಿಐಪಿ ಸಂಸ್ಕೃತಿ ನನಗಿಷ್ಟವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಹೇಳಿದ್ದಾರೆ.

ಮಂತ್ರಿಗಳಿಗೆ ಉಪಚಾರವನ್ನು ನೀಡುವುದು ತಪ್ಪಲ್ಲ. ಆದರೆ, ತುರ್ತುಪರಿಸ್ಥಿತಿ, ಅಪಾಯದ ಸನ್ನಿವೇಶಗಳು ಇಲ್ಲದ ಸಂದರ್ಭದಲ್ಲಿ ಅಧಿಕಾರಿಗಳ ವಾಹನಗಳಿಗೆ ದಾರಿಮಾಡಿಕೊಡುವ ಸಲುವಾಗಿ ಸಾರ್ವಜನಿಕರಿಗೆ ತೊಂದರೆ ನೀಡುವುದು ತಪ್ಪು ಎಂದು ಹೇಳಿರುವ ಫಡ್ನವೀಸ್ ಇಂತಹ ಘಟನೆಗಳಿಂದ ಉಂಟಾಗಿರುವ ಅಡಚಣೆಗಳಿಗೆ ತಮ್ಮ ಟ್ವಿಟರ್ ಖಾತೆಯ ಮೂಲಕ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾರತದ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲಬ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನೆಗೆ ತೆರಳುತ್ತಿದ್ದ ವೇಳೆ ಪ್ರತೀಯೊಂದು ರಸ್ತೆಯನ್ನು ತಡೆದು ಅಧಿಕಾರಿಗಳ ವಾಹನ ಹೋಗಲು ದಾರಿಮಾಡಿಕೊಡಲಾಗಿತ್ತು. ಇದರಿಂದ ಮುಂಬೈನ ಹಲವು ರಸ್ತೆಗಳಲ್ಲಿ ವಾಹನ ದಟ್ಟನೆಯ ಸಮಸ್ಯೆ ಎದುರಾಗಿತ್ತು.

ಈ ಘಟನೆ ಕುರಿತಂತೆ ಗಂಭೀರವಾಗಿ ಪರಿಗಣಿಸಿರುವ ಫಡ್ನವೀಸ್ ಅವರು, ತುರ್ತುಪರಿಸ್ಥಿತಿ ಇಲ್ಲದ ಸಮಯದಲ್ಲಿ ಅಧಿಕಾರಿಗಳು ರಸ್ತೆಯನ್ನು ತಡೆದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ತಪ್ಪು. ಇಂತಹ ಘಟನೆಗಳಿಂದಾಗುವ ತಪ್ಪುಗಳಿಗೆ ಕ್ಷಮೆಯಾಚಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದು, ಎನ್‌ಎಸ್‌ಸಿಐ ಘಟನೆ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

SCROLL FOR NEXT