ದೇಶ

ಕರಾಚಿಯಲ್ಲಿ ಹಿಂದೂಗಳ ಹೋಳಿ ಆಚರಣೆ: ಪಾಕ್ ವಿದ್ಯಾರ್ಥಿಗಳಿಂದ ಮಾನವ ಕವಚ

Vishwanath S

ಇಸ್ಲಾಮಾಬಾದ್: ಪ್ರತಿ ವರ್ಷದಂತೆ ಪಾಕಿಸ್ತಾನದ ಕರಾಚಿಯ ವಿಶ್ವಖ್ಯಾತ ಸ್ವಾಮಿ ನಾರಾಯಣ್ ಮಂದಿರದಲ್ಲಿ ಹಿಂದೂಗಳು ವೈಭವಯುತವಾಗಿ ಹೋಳಿ ಆಚರಿಸಿದರು.

ಹೋಳಿ ಆಚರಣೆ ಹಿನ್ನೆಲೆಯಲ್ಲಿ ಉಗ್ರರಿಂದ ಆಕ್ರಮಣಕ್ಕೆ ತುತ್ತಾಗುವ ಭಯವಿದ್ದರಿಂದ ಅಲ್ಲಿನ ವಿದ್ಯಾರ್ಥಿ ಸಂಘಟನೆ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಆಚರಣೆಗೆ ಬಿಗಿ ಬಂದೋಬಸ್ತ್ ವಹಿಸಿತ್ತು.

ಪಾಕಿಸ್ತಾನದ ನ್ಯಾಷನಲ್ ಸ್ಟೂಡೆಂಟ್ಸ್ ಫೆಡರೇಶನ್ ಸಂಘಟನೆಯ ವಿದ್ಯಾರ್ಥಿಗಳು ಶುಕ್ರವಾರ ಮಂದಿರ ಸುತ್ತಮುತ್ತ ಮಾನವ ಕವಚ ನಿರ್ಮಿಸಿದರು. ಈ ಮೂಲಕ, ಅಲ್ಪಸಂಖ್ಯಾತ ಸಮುದಾಯದಲ್ಲಿ ಮನೆಮಾಡಿದ್ದ ಅಂಜಿಕೆಯನ್ನು ಹೋಗಲಾಡಿಸುವ ಪ್ರಯತ್ನ ನಡೆದದ್ದು ವಿಶೇಷವಾಗಿತ್ತು.

ಪಾಕಿಸ್ತಾನದಲ್ಲಿ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ನಾಶಗೊಳಿಸುವ ಕಾರ್ಯಗಳು ಹೆಚ್ಚಾಗುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಪ್ರಮಾಣ ದಿನೇದಿನೇ ಕುಸಿಯುತ್ತಿದೆ. ಜೊತೆಗೆ ಮತಾಂತರ ಭೂತ ಹಿಂದೂಗಳನ್ನು ಅದರಲ್ಲೂ ಹಿಂದೂ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿದೆ.

ಹಿಂದೂಗಳು ಬಹಿರಂಗವಾಗಿ ಧಾರ್ಮಿಕ ಆಚರಣೆ ಮಾಡಿಕೊಳ್ಳಲು ಹೆದರಬೇಕಾದ ಸ್ಥಿತಿ ಇದೆ. ಇಂಥ ಘಳಿಗೆಯಲ್ಲಿ ಅವರಿಗೆ ಸ್ಥೈರ್ಯ ತುಂಬುವ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದು ಎನ್'ಎಸ್ಎಫ್ ಸಂಘಟನೆಯ ಮುಖಂಡರು ಹೇಳುತ್ತಾರೆ.

SCROLL FOR NEXT