ದೇಶ

ವಿಶ್ವದ 30 ಪ್ರಭಾವಿ ನಾಯಕರುಗಳ ಪಟ್ಟಿಯಲ್ಲಿ ಮೋದಿಗೆ ಸ್ಥಾನ

Mainashree

ನವದೆಹಲಿ: ವಿಶ್ವದ 30 ಪ್ರಭಾವಿ ನಾಯಕರುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯು ಒಬ್ಬರಾಗಿದ್ದಾರೆ.

ಟೈಮ್ಸ್ ಮ್ಯಾಗಜೀನ್ ಹೊರತಂದಿರುವ ವಿಶ್ವದ 30 ಪ್ರಭಾವಿ ನಾಯಕರುಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಸ್ಥಾನ ಸಿಕ್ಕಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಗೆ ಪಾಪ್ಯುಲಾರಿಟಿ ಆಧರಿಸಿ ಹಾಗೂ ಮಾಧ್ಯಮಗಳಲ್ಲಿ ಮೋದಿ ಹೊಂದಿರೋ ಖ್ಯಾತಿಯನ್ನ ಆಧರಿಸಿ ಟೈಮ್ಸ್ ಮ್ಯಾಗಜೀನ್ ಪಟ್ಟಿ ಹೊರತಂದಿದೆ.
ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಮೋದಿ ಅವರಿಗೆ 38 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಈ ಪಟ್ಟಿಯಲ್ಲಿ ಅಮೆರಿಕಾ ಅದ್ಯಕ್ಷ ಬರಾಕ್ ಒಬಾಮರಿಗೂ ಸ್ಥಾನ ಸಿಕ್ಕಿದ್ದು, ಬರಾಕ್ ಒಬಾಮಾ ಹೊರತು ಪಡಿಸಿದ್ರೆ ಮೋದಿಗೆ ಅತಿ ಹೆಚ್ಚಿನ ಫಾಲೋವರ್ಸ್ ಎಂದು ವರದಿ ಹೇಳಿದೆ.

ಹ್ಯಾರಿ ಪಾಟರ್ ಸಿರೀಸ್ ಹೊರತಂದ ಬ್ರಿಟೀಷ್ ಲೇಖಕ ಜೆಕೆ ರೌವ್‌ಲಿಂಗ್, ಸಿಂಗರ್ ಟೇಲರ್ ಸ್ವಿಫ್ಟ್ ಹಾಗೂ ಬೇಯಾನ್ಸ್ ಕೂಡ ಇದೇ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

SCROLL FOR NEXT