ಅಬುಜಾ: ಇರಾಕ್, ಸಿರಿಯಾ ಮಾತ್ರವಲ್ಲ, ಈಗ ಇಸಿಸ್ ಉಗ್ರರ ವ್ಯಾಪ್ತಿ ವಿಶ್ವಾದ್ಯಂತ ವಿಸ್ತರಣೆಯಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ನೈಜೀರಿಯಾದ ಉಗ್ರ ಸಂಘಟನೆ ಬೋಕೋ ಹರಾಮ್ ಕೂಡ ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ನಿಷ್ಠೆ ತೋರುವುದಾಗಿ ಘೋಷಿಸಿದೆ.
ಜತೆಗೆ, ಎಲ್ಲ ಮುಸ್ಲಿಮರೂ ಇಸಿಸ್‍ಗೆ ಬೆಂಬಲ ಸೂಚಿಸುವಂತೆ ಸೂಚಿಸಿದೆ. ಇಂತಹ ಸಂದೇಶವುಳ್ಳ ಆಡಿಯೋವನ್ನು ಬೋಕೋ ಹರಾಮ್ ನ ಟ್ವಿಟರ್ ಖಾತೆಯಲ್ಲಿ ಅಪ್‍ಲೋಡ್ ಮಾಡಲಾಗಿದೆ.