ಟೈಲರ್ ಸ್ವಿಫ್ಟ್ 
ದೇಶ

ಪಾಪ್ ಗಾಯಕಿ ಟೈಲರ್ ಸ್ವಿಫ್ಟ್ ಕಾಲಿನ ಬೆಲೆ ರು.250 ಕೋಟಿ!

ಟೈಲರ್ ಸ್ವಿಫ್ಟ್ ಕಾಲಿನ ಬೆಲೆ 250 ಕೋಟಿ! ಹೌದು ನೀವಿದನ್ನು ನಂಬಲೇ ಬೇಕು. ಗ್ರಾಮಿ ಪ್ರಶಸ್ತಿ ವಿಜೇತಳಾಗಿರುವ...

ಟೈಲರ್ ಸ್ವಿಫ್ಟ್ ಕಾಲಿನ ಬೆಲೆ 250 ಕೋಟಿ! ಹೌದು ನೀವಿದನ್ನು ನಂಬಲೇ ಬೇಕು. ಗ್ರಾಮಿ ಪ್ರಶಸ್ತಿ ವಿಜೇತಳಾಗಿರುವ ಪಾಪ್ ಗಾಯಕಿ ಟೈಲರ್ ಸ್ವಿಫ್ಟ್ ತನ್ನ  ಕಾಲುಗಳನ್ನು 40 ಮಿಲಿಯನ್ ಡಾಲರ್ (ಸರಿಸುಮಾರು ರು. 250 ಕೋಟಿ)ಗೆ ಇನ್ಶೂರೆನ್ಸ್ ಮಾಡಿಸಿದ್ದಾಳೆ ಎಂದು ಬಲ್ಲಮೂಲಗಳು ಸುದ್ದಿ ಮಾಡಿವೆ.

1989 ಎಂಬ ವಿಶ್ವ ಸಂಗೀತ ಪರ್ಯಟನೆಗೆ ಮುನ್ನುಡಿಯಾಗಿ ಈಕೆ ಕಾಲುಗಳಿಗೆ ವಿಮೆ ಮಾಡಿಸಿದ್ದಾಳೆ. ಸ್ಟೇಜ್ ಶೋಗಳನ್ನು ನೀಡುತ್ತಿರುವ ವೇಳೆ  ಏನಾದರೂ ಅವಘಡ ಸಂಭವಿಸಿ ತನ್ನ ಕಾಲುಗಳಿಗೆ ತೊಂದರೆಯಾದರೆ ತನ್ನ ಸಂಗೀತ ಜೀವನವೇ ಮುಗಿದುಹೋಗುತ್ತದೆ. ಈ ಕಾರಣದಿಂದಾಗಿಯೇ ತನ್ನ ಕಾಲುಗಳಿಗೆ ಇನ್ಶೂರೆನ್ಸ್ ಮಾಡಿಸಿರುವುದಾಗಿ ಸ್ವಿಫ್ಟ್ ಹೇಳಿಕೆ ನೀಡಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಸ್ವಿಫ್ಟ್ ಮಾತ್ರವಲ್ಲದೇಹದ ಅಂಗಾಂಗಕ್ಕೆ ವಿಮೆ ಮಾಡಿಸಿದವರು ಇನ್ನೂ ಇದ್ದಾರೆ

ಜೂಲಿಯಾ ರೋಬರ್ಟ್ಸ್ : ತನ್ನ ಸುಂದರವಾದ ಮುಗುಳ್ನಗೆಯನ್ನು 30 ಮಿಲಿಯನ್ ಡಾಲರ್ (ರು. 185 ಕೋಟಿ)ಗೆ ಇನ್ಶೂರೆನ್ಸ್ ಮಾಡಿಸಿದ್ದಾಳೆ.

ಡೇವಿಡ್ ಬೆಕಾಂ: ತನ್ನ ಸುವರ್ಣಕಾಲದಲ್ಲಿ ಫುಟ್ಬಾಲ್ ಆಟಗಾರ ಡೇವಿಡ್ ಬೆಕಾಂ ತನ್ನ ಕಾಲುಗಳನ್ನು 100 ಮಿಲಿಯನ್ ಪೌಂಡ್‌ಗೆ  ಇನ್ಶೂರೆನ್ಸ್ ಮಾಡಿಸಿದ್ದರು.

ಮಾರಿಯಾ ಕಾರಿ:
ಲೆಗ್ಸ್ ಆಫ್ ಎ ಗಾಡೆಸ್ ಎಂಬ ಜಾಹೀರಾತು ಪ್ರಚಾರಕ್ಕಾಗಿ ಪಾಪ್ ಗಾಯಕಿ ಮಾರಿಯಾ ಕಾರಿ ತನ್ನ ಕಾಲುಗಳನ್ನು 1 ಬಿಲಿಯನ್ ಡಾಲರ್ ( ಸರಿಸುಮಾರು ರು. 6000 ಕೋಟಿ)ಗೆ ಇನ್ಶೂರೆನ್ಸ್ ಮಾಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT